More

    ಬುಡಕಟ್ಟು ಗಿರಿಜನ ಆಶ್ರಮ ಶಾಲೆಗೆ ಮೆಂದಾರೆ ಮಕ್ಕಳು

    ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಮೆಂದಾರೆ ಗ್ರಾಮದ ಗಿರಿಜನರು ಇಂಡಿಗನತ್ತ ಸರ್ಕಾರಿ ಶಾಲೆಯ ಬದಲಾಗಿ ಮ.ಬೆಟ್ಟದಲ್ಲಿರುವ ಬುಡಕಟ್ಟು ಗಿರಿಜನ ಆಶ್ರಮ ಶಾಲೆಗೆ ಮಕ್ಕಳನ್ನು ಕಳುಹಿಸಲು ನಿರ್ಧರಿಸಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಬಿಇಒ ಮಹೇಶ್ ತಿಳಿಸಿದ್ದಾರೆ.

    ಮೆಂದಾರೆ ಗ್ರಾಮದಲ್ಲಿ 2-5ನೇ ತರಗತಿಯವರೆಗೆ 10 ಮಕ್ಕಳಿದ್ದು, ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಏ.26 ರಂದು ನಡೆದ ಮತಗಟ್ಟೆ ಧ್ವಂಸ ಘಟನೆಯಲ್ಲಿ ಇಲ್ಲಿನ ಗ್ರಾಮಸ್ಥರು ಹಲ್ಲೆಗೊಳಗಾಗಿದ್ದರು. ಹಾಗಾಗಿ ಭಯದಿಂದ ಪಾಲಕರು ಇಂಡಿಗನತ್ತ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ನಿರ್ಧರಿಸಿದ್ದರು. ಈ ಬಗ್ಗೆ ಮೇ 21 ರ ವಿಜಯವಾಣಿ ಸಂಚಿಕೆಯಲ್ಲಿ ಸಹಜ ಸ್ಥಿತಿಯತ್ತ ಮಕ್ಕಳ ಮನಸ್ಸು ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು.

    ಗುರುವಾರ ಗಿರಿಜನ ಹಿರಿಯ ಮುಖಂಡ ಮಾದಯ್ಯ ಅವರು ವಿಜಯವಾಣಿಯೊಂದಿಗೆ ಮಾತನಾಡಿ, ನಾವು ಈಗಾಗಲೇ ಅವಿದ್ಯಾವಂತರಾಗಿದ್ದು, ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ನಮ್ಮಂತೆ ನಮ್ಮ ಮಕ್ಕಳು ಆಗುವುದು ಬೇಡ. ಆದರೆ ಇಂಡಿಗನತ್ತ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ. ಬದಲಾಗಿ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಮ.ಬೆಟ್ಟದ ಬುಡಕಟ್ಟು ಆಶ್ರಮ ಶಾಲೆಗೆ ಕಳುಹಿಸುವುದಾಗಿ ತಿಳಿಸಿದರು.

    ಈ ಸಂಬಂಧ ಬಿಇಒ ಮಹೇಶ್ ಅವರು ಪತ್ರಿಕೆಗೆ ಪ್ರತಿಕ್ರಿಯಿಸಿ, ಮೇ 28 ರಂದು ಅಲ್ಲಿನ ಮುಖ್ಯ ಶಿಕ್ಷಕರನ್ನು ಗ್ರಾಮಕ್ಕೆ ಕಳುಹಿಸಿ ಮಾಹಿತಿ ಪಡೆಯುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಪಾಲಕರು ಮ.ಬೆಟ್ಟದ ಬುಡಕಟ್ಟು ಆಶ್ರಮ ಶಾಲೆಗೆ ಸೇರಿಸುವುದಾದರೆ ಮಕ್ಕಳನ್ನು ಆ ಶಾಲೆಗೆ ದಾಖಲಾತಿ ಮಾಡಿಸಲು ಜವಾಬ್ದಾರಿ ವಹಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts