More

    ಅಪಘಾತದಲ್ಲಿ 6 ಬೈಕ್ ಸವಾರರಿಗೆ ಗಾಯ

    ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ಶುಕ್ರವಾರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ.

    ಮಧುವನಹಳ್ಳಿ ಗ್ರಾಮದ ಚಂದ್ರು (19), ವಿಕಾಸ್(18), ನವನೀತ್ (18) ಹಾಗೂ ಬೆಂಗಳೂರಿನ ನಾಗೇಂದ್ರ (19), ರೋಹಿತ್ (20), ಮನೋಜ್(20) ಗಾಯಗೊಂಡವರು. ಬೆಂಗಳೂರಿನ ಮೂವರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ ತಮ್ಮ ಬೈಕ್‌ನಲ್ಲಿ ಬರುತ್ತಿದ್ದಾಗ ಕೊಳ್ಳೇಗಾಲ ಕಡೆಯಿಂದ ಮಧುವನಹಳ್ಳಿ ಕಡೆಗೆ ಮೂವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಸವಾರರು ಗಾಯಗೊಂಡರು.

    ತಕ್ಷಣ ಸ್ಥಳೀಯರು ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದರು. ಗ್ರಾಮಾಂತರ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತಕ್ಕೀಡಾದ ಎರಡು ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts