More

    ಜಗತ್ತಿಗೆ ಶಾಂತಿಯನ್ನು ಸಾರಿದ ಗೌತಮ ಬುದ್ಧ

    ಚಾಮರಾಜನಗರ : ಜಗತ್ತು ಯುದ್ಧ ಮತ್ತು ಸಂಘರ್ಷಗಳಿಂದ ನರಳುತ್ತಿರುವ ಸಂದರ್ಭದಲ್ಲಿ ಬುದ್ಧನ ಶಾಂತಿಯ ಸಂದೇಶ ಅತ್ಯಂತ ಅವಶ್ಯಕವಾಗಿದೆ ಎಂದು ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಹೇಳಿದರು.

    ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವ ವಿದ್ಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 2568ನೇ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಾಹಿಸಿ ಮಾತನಾಡಿದರು. ಬುದ್ಧನ ಶಾಂತಿ ಸಂದೇಶಗಳು, ತತ್ವಗಳು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಪ್ರಸ್ತುತ ಸಮಾಜಕ್ಕೆ ಬುದ್ಧ ಅನಿವಾರ್ಯವಾಗಿದ್ದಾನೆ. ಯಾವುದೇ ಆಯುಧಗಳನ್ನು ಬಳಸದೇ ದುಷ್ಟನಾದ ಅಂಗುಲಿಮಾಲನನ್ನು ಪರಿವರ್ತನೆ ಮಾಡಿದ ಗೌತಮ ಇಂದು ನಮ್ಮೆಲ್ಲರಿಗೂ ದಾರಿದೀಪವಾಗಬೇಕು. ಈ ಕಾರಣಕ್ಕೆ ಜಗತ್ತಿನ ಮೊದಲ ಬೆಳಕು ಬುದ್ಧ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

    ಅಂಧಕಾರ, ಮೌಢ್ಯ, ಅಸಮಾನತೆ ತುಂಬಿರುವ ಸಮಾಜಕ್ಕೆ ಬುದ್ಧನ ಸಂದೇಶಗಳು ದಿವ್ಯ ಔಷಧವಾಗಿದೆ. ಪ್ರಸ್ತುತ ಯಾರನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ಶಾಂತಿಯಿಂದ ಮಾತ್ರ ಇಂದು ಎಲ್ಲರನ್ನೂ ಗೆಲ್ಲಬಹುದಾಗಿದೆ. ಈ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ನಿಂಗರಾಜು, ಉಪನ್ಯಾಸಕರಾದ ಸುಷ್ಮಾ, ನಂದಿನಿ, ಭಾಗ್ಯಲಕ್ಷ್ಮೀ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಮಹೇಶ್, ಆರ್.ಕೋಡಿಉಗನೆ, ಪ್ರಮೋದ್, ಡಾ.ಸಂಗಪ್ಪ , ಭಾಗ್ಯಮ್ಮ, ಮಹೇಶ್ ಮತ್ತು ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts