More

    ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸುತ್ತಿರುವ ಮಳೆ

    ಚಾಮರಾಜನಗರ: ಜಿಲ್ಲೆಯ ವಿವಿದೆಡೆ ಮಳೆರಾಯ ತನ್ನ ಆರ್ಭಟವನ್ನು ಮುಂದುವರಿಸುತ್ತಿದ್ದು, ಬುಧವಾರವೂ ಹಲವೆಡೆ ಭಾರಿ ಮಳೆ ಸುರಿದ ಪರಿಣಾಮವಾಗಿ ಕೆರೆ-ಕಟ್ಟೆಗಳು ತುಂಬಿ ಹರಿದವು.

    ಚಾಮರಾಜನಗರ, ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಯಲ್ಲಿ ಜೋರು ಮಳೆಯಾದರೇ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಯಿತು. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ಕಡೆಗಳಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಹಲವು ಕಡೆಗಳಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಮಳೆರಾಯ ಸಾಕಷ್ಟು ತೊಂದರೆ ನೀಡಿದರೇ, ಹಲವು ಕಡೆಗಳಲ್ಲಿ ರೈತರು ಉಳುಮೆ ಮಾಡಲು ಕೃಷಿ ಭೂಮಿಯನ್ನು ಹದಗೊಳಿಸಿದರು.

    ಚಾಮರಾಜನಗರ ತಾಲೂಕಿನ ಹರದನಹಳ್ಳಿ, ಅಟ್ಟಗೂಳಿಪುರ, ಚಿಕ್ಕಹೊಳೆ, ಚಿಕ್ಕಹೊಳೆ ಚೆಕ್‌ಪೋಸ್ಟ್, ಸಿದ್ದಯ್ಯನಪುರ, ಚಂದಕವಾಡಿ, ಅರಳೀಪುರ, ಹೆಬ್ಬಸೂರು ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಅರ್ಧತಾಸಿಗಿಂತಲೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿಯಿತು. ಈ ವೇಳೆ ರೈತರ ತೋಟ, ಜಮೀನುಗಳಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಎಲ್ಲಾ ಕೆರೆ-ಕಟ್ಟೆಗಳು ಹಾಗೂ ಕಾಲುವೆಗಳು ಮಳೆನೀರಿನಿಂದ ತುಂಬಿ ಹರಿಯಿತು. ಹಲವೆಡೆ ರಸ್ತೆಗಳಲ್ಲಿ ನೀರು ಹರಿದು ವಾಹನ ಸವಾರರು ಪರದಾಡುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts