More

    ಮರಿಯಾಲ ಮಠಕ್ಕೆ ಮರಿತಿಬ್ಬೇಗೌಡ ಭೇಟಿ

    ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮರಿಯಾಲದ ಮಠಕ್ಕೆ ಮಂಗಳವಾರ ಭೇಟಿ ನೀಡಿ, ಅಲ್ಲಿನ ಮಠಾಧ್ಯಕ್ಷ ಶ್ರೀಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳಿಂದ ಆರ್ಶೀವಾದ ಪಡೆದರು.

    ತಾಲೂಕಿನಲ್ಲಿ ಚುನಾವಣಾ ಪ್ರಚಾರ ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ಮತಯಾಚನೆ ಮಾಡುವ ಸಂದರ್ಭದಲ್ಲಿ, ಶ್ರೀಮಠಕ್ಕೆ ಭೇಟಿ ನೀಡಿ, ಹಿರಿಯ ಶ್ರೀಗಳ ಗದ್ದಗೆಗೆ ನಮಸ್ಕಾರ ಮಾಡಿದರು. ಬಳಿಕ ಮಠಾಧ್ಯಕ್ಷ ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಫಲತಾಂಬಲು ನೀಡಿ ಸನ್ಮಾನಿಸಿದರು.

    ಈ ಸಂದರ್ಭದಲ್ಲಿ ಮರಿತಿಬ್ಬೇಗೌಡ ಅವರು ಮಾತನಾಡಿ, ಐದನೇ ಬಾರಿಗೆ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಆಯ್ಕೆಗೆ ಸ್ಪರ್ಧೆ ಮಾಡಿದ್ದು, ತಾವು ಅಶೀರ್ವಾದ ಮಾಡಬೇಕು. ತಮ್ಮ ಸಂಸ್ಥೆಯ ಶಿಕ್ಷಕರ ಬಂಧುಗಳು ಮೊದಲ ಪ್ರಾಶಸ್ತ್ಯ ಮತವನ್ನು ನನಗೆ ನೀಡುವಂತೆ ಸೂಚನೆ ನೀಡಬೇಕು. ತಮ್ಮೆಲ್ಲರ ಆರ್ಶಿವಾದದಿಂದ ಆಯ್ಕೆಯಾದರೆ, ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ದಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿದರು.

    ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಉಪನ್ಯಾಸಕ ಆಶೋಕ್, ಮಂಜುನಾಥ್, ಮುಖಂಡರಾದ ಬಳ್ಳಾರಿ ಗೌಡ, ಷಡಕ್ಷರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts