More

    ಜಿಲ್ಲೆಯ ನ್ಯಾಯಾಲಯಗಳಲ್ಲಿ 31,267 ಪ್ರಕರಣ ಇತ್ಯರ್ಥ

    ಚಾಮರಾಜನಗರ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಮಾ.16 ರಂದು ಆಯೋಜಿಸಲಾಗಿದ್ದ ಲೋಕಅದಾಲತ್‌ನಲ್ಲಿ ಸುಮಾರು 31,267 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಮಾಹಿತಿ ನೀಡಿದರು.

    ನಗರದ ಜಿಲ್ಲಾ ನ್ಯಾಯಾಲಯದ ವ್ಯಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ 1830 ಹಾಗೂ 29,437 ವ್ಯಾಜ್ಯಪೂರ್ವ ಪ್ರಕರಣ ಸೇರಿದಂತೆ ಒಟ್ಟು 31,267 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಅದರಂತೆ ಚಾಮರಾಜನಗರ ನ್ಯಾಯಾಲಯದ 19,875 ಪ್ರಕರಣ, ಯಳಂದೂರು 2178, ಕೊಳ್ಳೇಗಾಲ 5839 ಹಾಗೂ ಗುಂಡ್ಲುಪೇಟೆಯಲ್ಲಿ 3375 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗಿದೆ ಎಂದು ಹೇಳಿದರು.

    ಈ ಬಾರಿಯ ಲೋಕಅದಾಲತ್‌ನಲ್ಲಿ ಇಷ್ಟು ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದು ದಾಖಲೆಯಾಗಿದೆ. ಅದರಲ್ಲೂ 195 ಸಿವಿಲ್ ಪ್ರಕರಣ ಹಾಗೂ 1635 ಕ್ರಿಮಿನಲ್ ಪ್ರಕರಣಗಳು ಸೇರಿವೆ. ಈ ಎಲ್ಲಾ ಪ್ರಕರಣಗಳಿಂದ 8.36 ಕೋಟಿ ರೂ, ಇತ್ಯರ್ಥಗೊಂಡ ದಂಡದ ಮೊತ್ತವಾಗಿದೆ. ವಿಶೇಷ ಎಂಬಂತೆ ಸುಮಾರು 10-15 ವಷಗಳಿಂದ ನ್ಯಾಯಾಲಯದಲ್ಲಿ ಉಳಿದಿದ್ದ ಪ್ರಕರಣಗಳನ್ನು ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

    ಈ ಹಿಂದಿನ ವರ್ಷದಲ್ಲಿ ನಾಲ್ಕೂ ಬಾರಿ ಲೋಕ್ ಅದಾಲತ್ ಆಯೋಜನೆ ಮಾಡಲಾಗಿತ್ತು. ೆ.11 ರಂದು ನಡೆದ ಲೋಕ್‌ಅದಾಲತ್‌ನಲ್ಲಿ 11,975 ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಜು.8 ರಂದು ನಡೆದ ಲೋಕ್‌ಅದಾಲತ್‌ನಲ್ಲಿ 14,837 ಪ್ರಕರಣವನ್ನು ರಾಜೀ-ಸಂಧಾನಗೊಳಿಸಲಾಗಿತ್ತು. ಸೆ.9 ರಂದು ನಡೆದ ಲೋಕ್‌ಅದಾಲತ್‌ನಲ್ಲಿ 16,035 ಪ್ರಕರಣಗಳನ್ನು ಹಾಗೂ ಸೆ.9 ರಂದು ಆಯೋಜಿಸಿದ್ದ ಲೋಕ್‌ಅದಾಲತ್‌ನಲ್ಲಿ 17,647 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದರು.

    ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್ ಮಾತನಾಡಿ, ಲೋಕಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ಜನರಿಗಿದ್ದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈ ಮೂಲಕ ಪರಿಹಾರವನ್ನು ಒದಗಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts