More

    ಸಿಎಂ ಭೇಟಿಗೆ ಪಣತೊಟ್ಟ ರೈತರು ಬರೋಬ್ಬರಿ 80 ಕಿ.ಮೀ. ದೂರ ಆಕ್ರೋಶದ ನಡಿಗೆಯಲ್ಲೇ ಬರಲಿದ್ದಾರೆ!

    ಚಾಮರಾಜನಗರ: ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬರೋಬ್ಬರಿ 80 ಕಿಲೋ ಮೀಟರ್​ ದೂರ ಪಾದಯಾತ್ರೆ ಮೂಲಕ ಬರಲು ರೈತರು ಸಜ್ಜಾಗಿದ್ದಾರೆ.

    ನ‌.25ರಂದು ಮಹದೇಶ್ವರ ಬೆಟ್ಟಕ್ಕೆ ಸಿಎಂ ಯಡಿಯೂರಪ್ಪ ಆಗಮಿಸಲಿದ್ದಾರೆ. ಅಂದು ಸಿಎಂ ಅವರನ್ನು ಭೇಟಿ ಮಾಡಲೇಬೇಕೆಂದು ಪಣತೊಟ್ಟ ಚಾಮರಾಜನಗರ ಜಿಲ್ಲೆಯ ರೈತರು ನ.24ರಂದು ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಲಿದ್ದಾರೆ.

    ಹೌದು, ಈ ಭಾಗದ ಕಬ್ಬು ಬೆಳೆಗಾರರು ಬಣ್ಣಾರಿ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬೆಳೆದ ಕಬ್ಬಿಗೆ 16-17 ತಿಂಗಳಾದರೂ ಕಟಾವು ಮಾಡಿಲ್ಲ. ಸಕ್ಕರೆ ಇಳುವರಿ ಆಧಾರದ ಮೇಲಿನ ದರದಂತೆ 12.95 ಕೋಟಿ ರೂ. ಬಾಕಿ ನೀಡಿಲ್ಲ. ಉಪ ಉತ್ಪನ್ನಗಳ ಲಾಭಾಂಶವನ್ನು ರೈತರಿಗೆ ನೀಡುತ್ತಿಲ್ಲ ಎಂಬುದು ರೈತರ ಆಕ್ರೋಶ.

    ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಲು‌ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಸಂಚಾಲಕ ಕುಂತೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.

    ನ್ಯಾಯ ಬೇಡಿ ಮನೆ ಬಾಗಿಲಿಗೆ ಬಂದ ಶಾಸಕನಿಗೆ ಶಿಸ್ತು ಸಮಿತಿಯತ್ತ ಬೆರಳು ತೋರಿಸಿ ಡಿಕೆಶಿ ಎಸ್ಕೇಪ್​!

    ದನ ಕಾಯೋಕೆ ಹೋಗಿ… ವೈದ್ಯರಿಗೆ ಸಚಿವ ಸುಧಾಕರ್​ ಹಿಗ್ಗಾಮುಗ್ಗಾ ತರಾಟೆ

    ನಾಲೆ ಬಳಿ ಬೈಕ್-ಚಪ್ಪಲಿ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ: ಡೆತ್​ನೋಟ್​ನಲ್ಲಿತ್ತು ಯುವತಿಯ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts