More

    ದೆಹಲಿ ಜನರಿಗೆ ತುಂಬ ಸಂಕಷ್ಟದ ಪರಿಸ್ಥಿತಿ ಎದುರಾಗಲಿದೆ…ಇದು ನಮಗೆ ಸವಾಲು: ಅರವಿಂದ್ ಕೇಜ್ರಿವಾಲ್​

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಅಲ್ಲಿ ಆಸ್ಪತ್ರೆಗಳಲ್ಲಿ ಬೆಡ್​ ಕೊರತೆಯ ನೆಪವೊಡ್ಡಿ, ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

    ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಒಂದು ವಿಚಿತ್ರ ಆದೇಶ ಹೊರಡಿಸಿದ್ದರು. ದೆಹಲಿ ಸರ್ಕಾರದ ವ್ಯಾಪ್ತಿಯ ಆಸ್ಪತ್ರೆ (ಖಾಸಗಿ ಮತ್ತು ಸರ್ಕಾರಿ)ಗಳು ಸ್ಥಳೀಯರಿಗೆ ಮಾತ್ರ ಮೀಸಲಿರುತ್ತದೆ. ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುವುದು ಎಂದು ನಿನ್ನೆ ಘೋಷಿಸಿದ್ದರು. ಸಿಎಂ ಈ ಆದೇಶಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು.

    ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರ ಈ ಆದೇಶವನ್ನು ದೆಹಲಿ ಲೆಫ್ಟಿನಂಟ್ ಗವರ್ನರ್​ ಅನಿಲ್ ಬೈಜಾಲ್ ಅವರು ರದ್ದುಗೊಳಿಸಿದ್ದಾರೆ. ದೆಹಲಿಯವರು ಅಲ್ಲ ಎಂಬ ಕಾರಣಕ್ಕೆ ಯಾವ ರೋಗಿಗೂ ಚಿಕಿತ್ಸೆ ಸಿಗದಂತೆ ಆಗಬಾರದು ಎಂದು ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದಾರೆ.

    ಅನಿಲ್​ ಬೈಜಾಲ್​ ಅವರು ತಮ್ಮ ಆದೇಶವನ್ನು ರದ್ದುಗೊಳಿಸಿದ ಬೆನ್ನಲ್ಲೇ ಅರವಿಂದ್​ ಕೇಜ್ರಿವಾಲ್​ ಅವರು ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದೆಹಲಿ ಆಸ್ಪತ್ರೆಗಳನ್ನು ಸ್ಥಳೀಯರಿಗೆ ಮೀಸಲಿಡುವ ಸರ್ಕಾರದ ಆದೇಶವನ್ನು ಲೆಫ್ಟಿನೆಂಟ್​ ಗವರ್ನರ್​ ರದ್ದುಗೊಳಿಸಿದ್ದರಿಂದ ತುಂಬ ತೊಂದರೆಯಾಗಲಿದೆ. ನಮಗೆ ಸವಾಲಿನ ಪರಿಸ್ಥಿತಿ ಎದುರಾಗಲಿದೆ. ಮೊದಲೇ ಸಾಂಕ್ರಾಮಿಕ ರೋಗ ತಾಂಡವವಾಡುತ್ತಿದೆ. ಈ ಸಮಯದಲ್ಲಿ ದೇಶದ ವಿವಿಧೆಡೆಯಿಂದ ಇಲ್ಲಿಗೆ ಬಂದಿರುವವರಿಗೂ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೋಡುತ್ತ ಹೋದರೆ ನಮ್ಮಲ್ಲಿನ, ಸ್ಥಳೀಯ ಜನರಿಗೆ ಟ್ರೀಟ್​ಮೆಂಟ್​ ಕೊಡುವುದು ತುಂಬ ಕಷ್ಟವಾಗಿಬಿಡುತ್ತದೆ.

    ಆದರೇನು ಮಾಡುವುದು? ದೇವರ ಚಿತ್ತವೇ ಹಾಗಿದೆ ಎನ್ನಿಸುತ್ತದೆ. ದೇಶದ ಬೇರೆಬೇರೆ ಭಾಗದ ಬಡವರಿಗೂ ಸೇವೆ ಸಲ್ಲಿಸಲು ಅವನು ಕೊಟ್ಟ ಅವಕಾಶ ಎನ್ನಿಸುತ್ತದೆ. ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತೇವೆ ಎಂದು ಟ್ವೀಟ್​ ಮಾಡಿದ್ದಾರೆ.

    ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಚೇರ್​ಮನ್​ ಆಗಿರುವ ಬೈಜಾಲ್​ ಅವರು ಮುಖ್ಯಮಂತ್ರಿಯ ಘೋಷಣೆ ವಿರುದ್ಧ ಆದೇಶ ಹೊರಡಿಸಿದ್ದು, ದೆಹಲಿಯ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್​ಗಳು ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಆತ ಸ್ಥಳೀಯ ಅಲ್ಲ ಎಂಬ ಕಾರಣ ಹೇಳಿ ಯಾವ ಕಾರಣಕ್ಕೂ ಟ್ರೀಟ್​ಮೆಂಟ್​ ನೀಡದೆ ಇರಬಾರದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts