More

    ದುಡಿಯುವ ಕೈಗಳಿಗೆ ಕೆಲಸ

    ಚಳ್ಳಕೆರೆ: ತಾಲೂಕಿನ ಪಗಡಲಬಂಡೆ ಗ್ರಾಮದ ಕೆರೆಯಲ್ಲಿ ಉದ್ಯೋಗ ಖಾತ್ರಿ ಕೆಲಸ ನಡೆಯುವ ಸ್ಥಳಕ್ಕೆ ಬುಧವಾರ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಹೊನ್ನಾಂಬ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಬಳಿಕ ಮಾತನಾಡಿ, ಲಾಕ್‌ಡೌನ್ ಕಾರಣಕ್ಕೆ ಸಮಸ್ಯೆ ಒಳಗಾಗಿದ್ದ ಕಾರ್ಮಿಕರಿಗೆ ಖಾತ್ರಿ ಯೋಜನೆಯಡಿ ಮತ್ತೆ ಕೆಲಸ ನೀಡಲಾಗಿದೆ. ಪರಸ್ಪರ ಅಂತರ ಕಾಪಾಡಿಕೊಂಡು ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಖಾತ್ರಿ ಯೋಜನೆಯ ಸದುಪಯೋಗ ಮಾಡಿಕೊಳ್ಳಲು ರೈತ ಕುಟುಂಬಗಳು ತಮ್ಮ ಜಮೀನುಗಳಲ್ಲೆ ಬದು ನಿರ್ಮಾಣ ಕಾಮಗಾರಿ ಮಾಡಿಕೊಂಡರೂ ಅನುದಾನ ಸಿಗುತ್ತದೆ.

    ಖಾತ್ರಿ ಯೋಜನೆಯಡಿ ಕೆಲಸ ಮಾಡಲು ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ತಮ್ಮ ಜಮೀನಿನ ಕೆಲಸ ಮತ್ತು ಸಾಮೂಹಿಕ ಕಾಮಗಾರಿಗಳ ಕೆಲಸದಲ್ಲಿ ಕೂಲಿ ಹಣ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ತಾಪಂ ಇಒ ಶ್ರೀಧರ್ ಬಾರಿಕರ್, ಗ್ರಾಪಂ ಅಧ್ಯಕ್ಷ ಕೆ.ಬೊಮ್ಮಲಿಂಗಪ್ಪ, ಸದಸ್ಯರಾದ ಬಂಡೆ ರುದ್ರಪ್ಪ, ಟಿ.ಸಿದ್ದೇಶ, ಶೈಲಪ್ಪ, ಮುಖಂಡರಾದ ಅಂಗಡಿ ರಾಜಣ್ಣ, ಗಿರೀಶ, ವಿ.ವೀರೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುತ್ತುರಾಜ್, ತಾಂತ್ರಿಕ ಸಂಯೋಜಕ ಮಂಜುನಾಥ್, ಟಿ. ದೇವರಾಜ್, ಜಿ.ಸಿದ್ದೇಶ್, ಐಇಸಿ ಸಂಯೋಜಕ ಪ್ರವೀಣ್, ಎಂಐಸಿ ಸಂಯೋಜಕ ಮಹೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts