More

    ಪರ್ಸಂಟೇಜ್ ಕಡೆ ಲಕ್ಷೃ, ಅಭಿವೃದ್ಧಿ ನಿರ್ಲಕ್ಷ್ಯ

    ಚಳ್ಳಕೆರೆ: ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಪರ್ಸೆಂಟೇಜ್ ವ್ಯವಹಾರದಲ್ಲಿ ಭಾಗಿಯಾದ ಈ ಈ ಸರ್ಕಾರದ ಆಯಸ್ಸು ಇನ್ನು 40 ದಿನ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

    ಬಿಎಂಜಿಎಚ್‌ಎಸ್ ಶಾಲಾವರಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಜೆಪಿ ವಿರುದ್ದ ಆರೋಪಗಳ ಮಳೆಗರೆದರು. ಪರಿಶಿಷ್ಟ ಜಾತಿ,ಪಂಗಡಗಳ ಪ್ರಗತಿಗೆ ಆದ್ಯತೆ ನೀಡಿಲ್ಲ. ನರೇಗಾದಡಿ 27 ಸಾವಿರ ಕೋಟಿ ರೂ. ಅನುದಾನ ಕಡಿತವಾಗಿದೆ. ಪಡಿತರ ಅಕ್ಕಿಯನ್ನು 7-5 ಕೆಜಿಗೆ ಇಳಿಸಲಾಗಿದೆ ಎಂದು ದೂರಿದರು.

    ರೈತರ ಆದಾಯ ದ್ವಿಗುಣದ, ಖಾತೆಗೆ 15ಲಕ್ಷ ರೂ.ಹಾಕುವ, ಕಪ್ಪು ಹಣ ಮರಳಿ ತರುವ ಭರವಸೆಗಳು ಹುಸಿಯಾಗಿವೆ ಎಂದರು. ಎಸ್ಸಿ-ಎಸ್ಟಿ ಮೀಸಲು ಹೆಚ್ಚಳ ಏನಾಯಿತು ಎಂದು ಮೀಸಲು ಕ್ಷೇತ್ರದಿಂದ ಗೆದ್ದು ಕೇಂದ್ರ ಮಂತ್ರಿಯಾದ ಎ.ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸಿದರು.

    ಕೆ.ಎಚ್.ಮುನಿಯಪ್ಪ, ಎಸ್.ತಿಪ್ಪೇಸ್ವಾಮಿ, ಎಂ.ಎಚ್.ರೇವಣ್ಣ, ಸಲೀಂ ಅಹಮ್ಮದ್, ನಗರಸಭಾ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಆರ್.ಮಂಜುಳಾ, ಕೆ.ವೀರಭದ್ರಯ್ಯ, ಶಶಿಧರ, ಆರ್.ಪ್ರಸನ್ನಕುಮಾರ್, ಬಿ. ಫರೀದ್‌ಕಾನ್, ಗೀತಾ ನಂದಿನಿಗೌಡ, ರಮೇಶ್‌ಗೌಡ ಇದ್ದರು.

    ಚಳ್ಳಕೆರೆಯಲ್ಲಿ ಅಭಿವೃದ್ಧಿ: ಕನಕಪುರ ಕ್ಷೇತ್ರದಲ್ಲೂ ಕಾಣದಷ್ಟು ಅಭಿವೃದ್ಧಿಯನ್ನು ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿ ಮಾಡಿದ್ದಾರೆ. ಡಿ.ಸುಧಾಕರ್,ಎನ್.ಜಯಣ್ಣ ಬಳಿಕ ರಘುಮೂರ್ತಿ ಅವರನ್ನು ಬೆಂಬಲಿಸಿದ್ದೀರಿ. 2023ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಲು ಡಿಕೆಶಿ ಮನವಿ ಮಾಡಿದರು.

    ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸಿದ್ದರಾಮಯ್ಯ ಆಡಳಿತದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ವೇದಾವತಿ ಭಾಗದ ಗೋಸಿಕೆರೆ ಚೆಕ್‌ಡ್ಯಾಂ ಸೇರಿ ನಗರ ವ್ಯಾಪ್ತಿಯ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಬೇಸರಿಸಿದರು.

    ಭ್ರಷ್ಟಾಚಾರಕ್ಕೆ ಗೂಳಿಹಟ್ಟಿ ಪತ್ರ ಸಾಕ್ಷಿ: ಭದ್ರಾ ಮೇಲ್ದಂಡೆ ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ಆಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವರು ಮುಖ್ಯಮಂತ್ರಿ ಹಾಗೂ ಇಲಾಖೆ ಕಾರ್ಯದರ್ಶಿಗೆ ಬರೆದ ಪತ್ರವೇ ಈ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts