More

    ನಗರಾಭಿವೃದ್ಧಿಗೆ ಮೊದಲು ಹಣ ಮೀಸಲಿಡಿ

    ಚಳ್ಳಕೆರೆ: ವಿಸ್ತಾರವಾಗಿ ಬೆಳೆಯುತ್ತಿರುವ ನಗರದ ಸ್ವಚ್ಛತೆ, ಪ್ರತಿ ಬೀದಿಗಳಿಗೂ ಗುಣಮಟ್ಟದ ವಿದ್ಯುತ್ ದೀಪಗಳ ಅಳವಡಿಕೆ, ಉದ್ಯಾನವನ ಮತ್ತು ಸ್ಮಶಾನ ಜಾಗಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿರಿಸಬೇಕೆಂದು ಮಂಗಳವಾರ ನಡೆದ ನಗರಸಭೆಯ 2020-21ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಮತ್ತು ಸಾರ್ವಜನಿಕರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಾಮಾಜಿಕ ಹೋರಾಟಗಾರ ಎಚ್.ಎಸ್. ಸೈಯದ್ ಮಾತನಾಡಿ, 27 ರಿಂದ 31 ವಾರ್ಡ್‌ಗಾಗಿ ಬೆಳೆದಿರುವ ನಗರದ ಅಭಿವೃದ್ಧಿಗೆ ಆಡಳಿತ ವರ್ಗ, ಜನಪ್ರತಿನಿಧಿಗಳು ಸಮನ್ವಯತೆ ಕಾಯ್ದುಕೊಳ್ಳಬೇಕು. ಬಹುತೇಕ ಕಡೆ ಮಾಲೀಕರು ಒಂದು ಅಂತಸ್ತಿಗೆ ಲೈಸೆನ್ಸ್ ಪಡೆದು ಮೂರು, ನಾಲ್ಕು ಅಂತಸ್ತಿನ ಮನೆ ಕಟ್ಟಿಸುತ್ತಿದ್ದಾರೆ. ಇದರಿಂದ ತೆರಿಗೆ ವಂಚನೆ ಆಗುತ್ತದೆ. ಇಂತಹ ಪ್ರಕರಣಗಳಿಗೆ ಜನಪ್ರತಿನಿಧಿಗಳು ಕುಮ್ಮಕ್ಕು ನೀಡಬಾರದು. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರಸಭೆ ವಾಣಿಜ್ಯ ಮಳಿಗೆಗಳನ್ನು ಕೇವಲ 1 ಸಾವಿರಕ್ಕೆ ಪಡೆದು ಬೇರೆಯವರಿಗೆ ಅಧಿಕ ಬಾಡಿಗೆಗೆ ನೀಡುತ್ತಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ಸಾರ್ವಜನಿಕ ಮುಕ್ತಿಧಾಮದಲ್ಲಿ ಶವ ದಹನ ಯಂತ್ರ ಅಳವಡಿಕೆ, ಮುಕ್ತಿ ವಾಹನ ಮತ್ತು ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ, ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕೆಂದು ನಗರಸಭೆ ಸದಸ್ಯರಾದ ಸಿ. ಶ್ರೀನಿವಾಸ, ಕವಿತಾ, ಎಂ.ಜೆ. ರಾಘವೇಂದ್ರ, ಮಾಜಿ ಅಧ್ಯಕ್ಷೆ ಷಂಷಾದ್‌ಬಾನು, ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಸೈನಿಕ ಬಸವರೆಡ್ಡಿ, ಬ್ರಾಹ್ಮಣ ಸಮಾಜದ ಮುಖಂಡ ತ್ಯಾಗರಾಜ್, ಗಾಂಧಿನಗರ ಕೃಷ್ಣ ಸಲಹೆ ನೀಡಿದರು.

    ಪೌರಾಯುಕ್ತ ಪಾಲಯ್ಯ, ಆಡಳಿತ ವರ್ಗ, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts