More

    ‘ಸೇವಾಲಾಲ್’ ಸಮಾಜ ಸುಧಾರಕ

    ಚಳ್ಳಕೆರೆ: ಬುದ್ಧ, ಬಸವರಂತೆ ಸಂತ ಸೇವಾಲಾಲ್ ಸಹ ಸಮಾಜ ಸುಧಾರಣೆಗಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಿಶ್ವದ ವಿವಿಧ ದೇಶವಲ್ಲದೇ ಭಾರತದ 22 ರಾಜ್ಯಗಳಲ್ಲಿ ಬಂಜಾರ ಸಮುದಾಯ ಇರುವ ಮಾಹಿತಿ ಇದೆ. ಇವರ ಸಂಸ್ಕೃತಿ ಮತ್ತು ಭಾಷೆ, ಉಡುಪು ಒಂದೇ ಮಾದರಿಯಾಗಿದೆ. ಇದರಿಂದ ಈ ಸಮಾಜದವರಲ್ಲಿ ಒಗ್ಗಟ್ಟಿದೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕೇವಲ ತಾಂಡಾಗಳಲ್ಲದೇ ಲಂಬಾಣಿ ಹಟ್ಟಿಗಳೆಲ್ಲವನ್ನೂ ಕಂದಾಯ ಗ್ರಾಮಗಳನ್ನಾಗಿ ಮಾಡಿರುವುದರಿಂದ ಇಲ್ಲಿನ 43 ಹಟ್ಟಿಗಳಿಗೆ ಮಾನ್ಯತೆ ಸಿಕ್ಕಿದೆ. ಇದರಿಂದ ಸರ್ಕಾರಿ ಸೌಕರ್ಯ ಪಡೆದುಕೊಳ್ಳಲು ಅವಕಾಶವಾಗಿದೆ ಎಂದರು.

    ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಶಿಕ್ಷಕ ರಾಜಣ್ಣ, ಜಿಪಂ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಶಶಿಕಲಾ, ಸಿಬಾರ ಸೇವಾಲಾಲ್ ಮಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಿಇಒ ಸಿ.ಎಸ್.ವೆಂಕಟೇಶ್, ಮುಖಂಡರಾದ ಟಿ.ಗೀತಾಬಾಯಿ, ಶಂಕ್ರಾನಾಯ್ಕಾ, ಎಂ.ಚಂದ್ರಣ್ಣ, ಜಿ.ನಾಗೇಂದ್ರನಾಯ್ಕ, ಡಾ.ನಾಗೇಂದ್ರನಾಯ್ಕ, ಸತೀಶ್‌ನಾಯ್ಕ, ಆರ್.ಪ್ರಸನ್ನಕುಮಾರ್ ಮತ್ತಿತರರಿದ್ದರು.

    ಸ.ರಿ.ಗ.ಮ.ಪ. ಸ್ಪರ್ಧಿ, ಕುರಿಗಾಹಿ ಹನುಮಂತ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಜನಪದ ಹಾಡುಗಳ ಮೂಲಕ ಜನರನ್ನು ರಂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts