More

    ಸರ್ವಕಾಲಕ್ಕೂ ಸರ್ವಜ್ಞ ಚಿಂತನೆ ಅಗತ್ಯ

    ಚಳ್ಳಕೆರೆ: ಲೋಕ ಬದುಕಿನ ಅನುಭವವನ್ನು ತ್ರಿಪದಿಗಳ ಸಾಹಿತ್ಯ ಮೂಲಕ ಜಗತ್ತಿಗೆ ತಿಳಿಸಿರುವ ಸರ್ವಜ್ಞ ಸರ್ವಕಾಲಕ್ಕೂ ಲೋಕದ ಜ್ಞಾನಿಯಾಗಿ ಉಳಿದುಕೊಂಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತ್ರಿಪದಿ ಕವಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಾಹಿತ್ಯ ಸಮಾಜದ ಒಳ ಅರಿವನ್ನು ತಿಳಿಸುತ್ತದೆ ಎಂದರು.

    ಪರಿಶ್ರಮ ಬದುಕಿನೊಂದಿಗೆ ಶೋಷಿತ ನೆಲೆಯಲ್ಲಿರುವ ಕುಂಬಾರ ಸಮಾಜ ಸಾಮಾಜಿಕವಾಗಿ ಸಂಘಟಿತರಾಗುವ ಮೂಲಕ ಮುಖ್ಯವಾಹಿನಿಗೆ ಬರುವ ಕೆಲಸ ಆಗಬೇಕು ಎಂದು ಹೇಳಿದರು.

    ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಶೋಷಿತ ಸಮುದಾಯಗಳನ್ನು ಕೇವಲ ಆಡಳಿತ ಸರ್ಕಾರಗಳು ಅಭಿವೃದ್ಧಿಯ ನೆಲೆಗೆ ತರಲು ಸಾಧ್ಯವಿಲ್ಲ. ಸಮುದಾಯದ ಮುಖಂಡರ ಶ್ರಮ ಅಗತ್ಯ ಎಂದರು.

    ಕುಂಬಾರ ಸಮುದಾಯದ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ಜನಾಂಗದಲ್ಲಿ ಶಿಕ್ಷಣದ ಮಹತ್ವ ತಿಳಿದುಕೊಳ್ಳುವ ಜಾಗೃತಿಯಾಗಬೇಕು. ಬದಲಾದ ಸಮಾಜದಲ್ಲಿ ಕುಲಕಸುಬುಗಳನ್ನು ನಂಬಿಕೊಂಡು ಜೀವನ ಮಾಡುವುದು ಕಷ್ಟವಿದೆ. ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಜಾಗೃತಿ ಮೂಡಬೇಕು ಎಂದು ಹೇಳಿದರು.

    ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ನಗರಸಭೆ ಸದಸ್ಯ ಬಿ.ಟಿ.ರಮೇಶಗೌಡ, ರೈತ ಮುಖಂಡ ಕೆ.ಪಿ.ಭೂತಯ್ಯ ಇತರರು ಉಪಸ್ಥಿತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts