More

    ಸೌಲಭ್ಯವಿಲ್ಲದೆ ಇಂದಿರಾ ಕ್ಯಾಟೀನ್ ಸ್ಥಗಿತ

    ಚಳ್ಳಕೆರೆ: ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಆರು ತಿಂಗಳಿನಿಂದ ವೇತನ ಇಲ್ಲದೆ, ನೀರಿನ ಅನಾನುಕೂಲ ಹಿನ್ನೆಲೆ ಶನಿವಾರ ಬಾಗಿಲು ಮುಚ್ಚಿರುವ ಘಟನೆ ನಗರದಲ್ಲಿ ನಡೆದಿದೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗೆ ಹೆಚ್ಚಿನ ಸೌಲಭ್ಯ ಎನ್ನಲಾಗಿತ್ತು. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿಯೇ ಇದೆ.

    ಕ್ಯಾಂಟೀನ್ ನಿರ್ವಹಣೆಗೆ ಏಳು ಹುದ್ದೆ ಮಂಜೂರಾತಿ ಇದೆ. ಇದರಲ್ಲಿ ನಾಲ್ಕು ಜನ ಮಾತ್ರ ಶ್ರಮವಹಿಸಿ ನಿರ್ವಹಣೆ ಮಾಡುತ್ತಿದ್ದೇವೆ.

    ಪ್ರತಿದಿನ ಬೆಳಗಿನ ತಿಂಡಿಗೆ 450 ರಿಂದ 550, ಊಟಕ್ಕೆ 300ರಿಂದ 400 ಜನ ಬಂದು ಹೋಗುತ್ತಾರೆ. ಕೇವಲ ಮೂರು ಜನ ವ್ಯವಸ್ಥೆ ಮಾಡುವುದು ಕಷ್ಟದ ಕೆಲಸವಾಗಿದೆ.

    ಅಡುಗೆ ತಯಾರಕರಿಗೆ 20 ಸಾವಿರ ಮಾಸಿಕ, ಇಬ್ಬರು ಸಹಾಯಕರಿಗೆ ತಲಾ 10 ಸಾವಿರ, ಕ್ಯಾಷಿಯರ್‌ಗೆ 12 ಸಾವಿರ ವೇತನವಿದೆ. ಆದರೆ, ಕಳೆದ ಜನವರಿಯಿಂದ ವೇತನ ನೀಡಿಲ್ಲ.

    ಆದರೂ, ಕ್ಯಾಂಟೀನ್ ನಿರ್ವಹಣೆ ಮಾಡಿದ್ದೇವೆ. ಕಳೆದ ಒಂದು ವಾರದಿಂದ ಮೋಟಾರ್ ರಿಪೇರಿಯಾಗಿ ನೀರಿನ ಅನುಕೂಲವಿಲ್ಲ.

    ನಿರ್ವಹಣೆಗೆ ಬೇಕಿರುವ 50ರಿಂದ 60 ಕೊಡ ನೀರು ತರಲಾಗದೆ ಬೇಸತ್ತು ಕ್ಯಾಂಟೀನ್ ಸಹವಾಸವೇ ಬೇಡ ಎಂದು ಸಿಬ್ಬಂದಿ ಕರ್ತವ್ಯಕ್ಕೆ ಬಂದಿಲ್ಲ.

    ನೀರಿನ ಅನುಕೂಲ ಮಾಡುವಂತೆ ಗುತ್ತಿಗೆದಾರರಿಗೆ ಸಾಕಷ್ಟು ಸಾರಿ ಕೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲದ ಕಾರಣ ಬಾಗಿಲು ಮುಚ್ಚಲಾಗಿದೆ ಎಂದು ಕ್ಯಾಷಿಯರ್ ಜೆ.ಪಿ. ಶ್ರೀಧರ ಅಳಲು ತೋಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts