More

    ಶೇಂಗಾ ವಿತರಣೆಯಲ್ಲಿ ತಾರತಮ್ಯ

    ಚಳ್ಳಕೆರೆ: ಕೃಷಿ ಇಲಾಖೆಯು ಶೇಂಗಾ ವಿತರಣೆಯಲ್ಲಿ ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವರ್ಗದ ರೈತರು ಎಂದು ತಾರತಮ್ಯ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆರೋಪಿಸಿದ್ದಾರೆ.

    ಎಲ್ಲ ರೈತರಿಗೂ ಒಂದೇ ತೆರನಾದ ಮಳೆ ಬರುತ್ತದೆ. ಎಲ್ಲ ಕೃಷಿಕರ ಕಷ್ಟ ಒಂದೇ ಆಗಿರುತ್ತದೆ. ಸರ್ಕಾರದ ಸೌಲಭ್ಯದಲ್ಲಿ ರೈತರಿಗೆ ತಾರತಮ್ಯ ಮಾಡದಂತೆ ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ್ದಾರೆ.

    ಎಸ್ಸಿ-ಎಸ್ಟಿ ರೈತರಿಗೆ ಸಬ್ಸಿಡಿ ದರದಲ್ಲಿ ಶೇಂಗಾ ವಿತರಿಸಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಸಬ್ಸಿಡಿ ಸೌಲಭ್ಯ ಸಿಗುತ್ತಿಲ್ಲ. ಎಲ್ಲ ರೈತರಿಗೂ ಒಂದು ಕ್ವಿಂಟಾಲ್‌ಗೆ 4 ಸಾವಿರ ರೂ. ನಂತೆ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪಂಚಾಯಿತಿ ಮಟ್ಟದಲ್ಲಿ ಶೇಂಗಾ ವಿತರಣೆ ವ್ಯವಸ್ಥೆ ವಿಳಂಬವಾಗುತ್ತಿದೆ. ಬಿತ್ತನೆ ಸಮಯ ಆರಂಭವಾಗಿದ್ದು, ವಿತರಣಾ ಕೇಂದ್ರದಲ್ಲಿ ಎಲ್ಲ ರೈತರಿಗೂ ಶೇಂಗಾ ವಿತರಣೆಗೆ ವ್ಯವಸ್ಥೆ ಕಲ್ಪಿಸಬೇಕು.

    ಮುಂಗಾರು ಬಿತ್ತನೆ ಸಮಯದಲ್ಲಿ ರೈತರಿಗೆ 8 ಸಾವಿರಕ್ಕೆ ಶೇಂಗಾ ವಿತರಿಸುವ ಕೃಷಿ ಇಲಾಖೆ, ರೈತರಿಂದ ಕೇವಲ 3 ಸಾವಿರಕ್ಕೆ ಖರೀದಿಕೊಳ್ಳಲಾಗುತ್ತದೆ. ಇಂತಹ ತಾರತಮ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts