More

    ಬೆಳೆನಷ್ಟಗೊಂಡ ರೈತರಿಗೆ ಪರಿಹಾರ ನೀಡಿ

    ಚಳ್ಳಕೆರೆ: ಲಾಕ್‌ಡೌನ್‌ನಿಂದ ಮಾರಾಟವಾಗದೇ ಜಮೀನಿನಲ್ಲೇ ಕರಬೂಜ, ಕಲ್ಲಂಗಡಿ, ಪಪ್ಪಾಯ, ಈರುಳ್ಳಿ, ಟೊಮ್ಯಾಟೊ ಹಾಳಾಗಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ತಾಲೂಕಿನಲ್ಲಿ 20 ಕೋಟಿ ರೂ. ವೆಚ್ಚದ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಗ್ರಾಮೀಣ ಭಾಗದ ರೈತರು ಈರುಳ್ಳಿ ಮಾರಾಟ ಮಾಡಿಕೊಳ್ಳಲಾಗದೆ ಜಮೀನಿನಲ್ಲೇ ಸಂಗ್ರಹಿಸಿದ್ದು, ಮಳೆ ಆರಂಭವಾದರೆ ಸಂಪೂರ್ಣ ನೀರುಪಾಲುಗುತ್ತದೆ. ಸರ್ಕಾರ ಮಧ್ಯ ಪ್ರವೇಶಿಸಿ ಈರುಳ್ಳಿ ಖರೀದಿಗೆ ಮುಂದಾಗಬೇಕು. ಇಲ್ಲವೆ ಉಗ್ರಾಣಗಳಲ್ಲಿ ಸಂಗ್ರಹ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

    ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮುಖಂಡರಾದ ಟಿ.ಹಂಪಣ್ಣ, ಶ್ರೀನಿವಾಸ ರೆಡ್ಡಿ, ದಯಾನಂದ ಮೂರ್ತಿ, ತಿಪ್ಪೇಸ್ವಾಮಿ ಇತರರಿದ್ದರು.

    ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ್ ಹೇಳಿಕೆ: ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಗ್ರಾಮ ಲೆಕ್ಕಾಧಿಕಾರಿಗಳ ಸಮ್ಮುಖದಲ್ಲಿ ಜಮೀನುಗಳಿಗೆ ತೆರಳಿ ಬೆಳೆಯ ಜಿಪಿಎಸ್ ಫೋಟೋ ಸಹಿತ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಇದು ಮುಗಿದ ಕೂಡಲೇ ಸರ್ಕಾರಕ್ಕೆ ಕಳಿಸಿಕೊಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts