More

    ಹೊರ ರಾಜ್ಯದವರಿಗೆ ತಪಾಸಣೆ

    ಚಳ್ಳಕೆರೆ: ನಗರ ಸೇರಿ ತಾಲೂಕಿನ ವಿವಿಧೆಡೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಹೊರ ರಾಜ್ಯಗಳಿಂದ ಬಂದಿದ್ದ 23 ಜನರ ಆರೋಗ್ಯ ತಪಾಸಣೆ ನಡೆಸಿ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದರು.

    ದೆಹಲಿ ಹಾಗೂ ಗುಜರಾತಿನಿಂದ ಬಂದು ನಗರದ ಸೂಜಿಮಲ್ಲೇಶ್ವರ ನಗರ, ಗಾಂಧಿನಗರ, ಜನತಾ ಕಾಲನಿ, ಅಂಬೇಡ್ಕರ್ ನಗರ, ನಾಯಕನಹಟ್ಟಿ, ಪರಶುರಾಂಪುರದಲ್ಲಿದ್ದ ಜನರನ್ನು ಗುರುತಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

    ನಗರದ 12 ಜನರ ಗುಂಪೊಂದು ಫೆ.16ರಂದು ದಾವಣಗೆರೆಗೆ ತೆರಳಿ ಅಲ್ಲಿಂದ ರೈಲು ಪ್ರಯಾಣದ ಮೂಲಕ ಗುಜರಾತ್ ರಾಜ್ಯದ ಸೂರತ್‌ನಲ್ಲಿ ನಡೆದಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾ.18ರಂದು ಮತ್ತೆ ರೈಲಿನಲ್ಲಿ ಚಳ್ಳಕೆರೆ ನಗರಕ್ಕೆ ಹಿಂತಿರುಗಿತ್ತು.

    11 ಜನರ ಮತ್ತೊಂದು ತಂಡ ದೆಹಲಿಯ ಅಜ್ಮೀರ್ ನಗರಕ್ಕೆ ಭೇಟಿ ನೀಡಿ ಬಳಿಕ ಮಾ.3ರಂದು ದೆಹಲಿಯಿಂದ ನಗರಕ್ಕೆ ವಾಪಾಸಾಗಿತ್ತು. ಆದರೆ, ಮಾ.8ರಂದು ನಡೆದ ನಿಜಾಮುದ್ದೀನ್ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು.

    ಪೊಲೀಸ್ ಉಪ ಅಧೀಕ್ಷಕ ರೋಷನ್ ಜಮೀರ್, ವೃತ್ತ ನಿರೀಕ್ಷಕ ಇ.ಆನಂದ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್.ಪ್ರೇಮಸುಧಾ, ಡಾ.ಪಿ.ಎನ್.ನಾಗರಾಜ್, ಡಾ.ಆದಿಮನಿ, ಆರೋಗ್ಯ ಸಹಾಯಕರಾದ ಎಸ್.ಬಿ.ತಿಪ್ಪೇಸ್ವಾಮಿ, ಗಂಗಾಧರ, ಪ್ರಸನ್ನ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts