More

    VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ ಸಂಗತಿಯೇನಲ್ಲ: ಚಕ್ರವರ್ತಿ ಸೂಲಿಬೆಲೆ

    ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ ಅವರು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ವಿವರವಾಗಿ ಮಾತನಾಡಿರುವ ಅವರು ಡಿಸೆಂಬರ್​ 22ರಂದು ಸಿಎಎ ಪರವಾಗಿ ಟೌನ್​ಹಾಲ್​ ಬಳಿ ನಡೆದ ಕಾರ್ಯಕ್ರಮದ ವೇಳೆ ಜನಜಂಗುಳಿಯ ನಡುವೆಯಿಂದ ದೊಡ್ಡ ಕಲ್ಲೊಂದು ನನ್ನ ಎದೆ ಮೇಲೆ ಬಿತ್ತು. ಆದರೆ ನಾನು ಅದನ್ನು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಬಳಿಕ ಪೊಲೀಸ್​ ಆಯುಕ್ತರಿಗೆ ತಿಳಿಸಿದಾಗ ಈ ಬಗ್ಗೆ ಆಳವಾಗಿ ಪರಿಶೀಲಿಸುವುದಾಗಿ ತಿಳಿಸಿದರು. ಅಲ್ಲದೆ, ದಿನನಿತ್ಯ ಅಪ್​ಡೇಟ್​ ಕೊಡುತ್ತಿದ್ದರು ಎಂದು ತಿಳಿಸಿದರು.

    ಘಟನೆ ಬಳಿಕ ಸ್ಥಳೀಯ ಪೊಲೀಸರು ದಿನನಿತ್ಯ ನಮ್ಮ ಕಚೇರಿಗೆ ಬಂದು ಬೀಟ್​ ಹಾಕಿ ಹೋಗುತ್ತಾರೆ. ಪೊಲೀಸರು ವ್ಯವಸ್ಥಿತವಾದ ಸಹಕಾರ ನೀಡುತ್ತಿದ್ದಾರೆ. ನಿನ್ನೆ ರಾತ್ರಿ ಫೋನ್​ ಮಾಡಿ 6 ಮಂದಿಯನ್ನು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು. ನೀವು ಕೂದಲೆಳೆ ಅಂತರದಿಂದ ಪಾರಾಗಿದ್ದೀರಾ ಎಂದು ತಿಳಿಸಿದರು. ನಾನು ಕೂಡ ಧನ್ಯವಾದಗಳನ್ನು ತಿಳಿಸಿದೆ. ರಕ್ಷಣೆಯ ದೃಷ್ಟಿಯಿಂದ ನಿನ್ನೆ ಪೊಲೀಸ್​ ಆಯುಕ್ತರು ನನಗೆ ಕರೆ ಮಾಡಿ ಕೆಲವು ವಿಚಾರಗಳನ್ನು ಹೇಳಿದ್ದಾರೆ. ಖಂಡಿತವಾಗಿ ನಾನದನ್ನು ಪಾಲಿಸುತ್ತೇನೆ ಎಂದರು.

    ಇದಕ್ಕೂ ಮುನ್ನ ಪೊಲೀಸರು ನನಗೇನು ಗಂಭೀರವಾದ ಎಚ್ಚರಿಕೆಯನ್ನು ಕೊಟ್ಟಿರಲಿಲ್ಲ. ನಾನು ಘಟನೆ ಹೇಳಿಕೊಂಡ ಮೇಲೆ ಸ್ವಲ್ಪ ಎಚ್ಚರಿಕೆ ವಹಿಸಿ ಎಂದು ಹೇಳಿದ್ದರು. ಇದನ್ನು ಬಿಟ್ಟರೆ ಎಂದಿಗೂ ಯಾರಿಂದಲೂ ನನಗೆ ಗಂಭೀರವಾದ ಎಚ್ಚರಿಕೆ ಬಂದಿರಲಿಲ್ಲ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಗನ್​ ಮ್ಯಾನ್​ ನೀಡುವುದಾಗಿ ಹೇಳಿದ್ದಾರೆ. ಆದರೆ, ವಿವಿಧ ಪ್ರದೇಶಗಳಲ್ಲಿ ನನ್ನ ಕಾರ್ಯಕ್ರಮ ಇರುವುದರಿಂದ ಇದರ ನಿರ್ವಹಣೆ ಹೇಗೆ ಎಂಬ ಆಲೋಚನೆಯೂ ಇದೆ. ಆದರೆ, ನನ್ನ ಹಿತೈಷಿಗಳು, ಸ್ನೇಹಿತರು ಹೇಳಿರುವುದರಿಂದ ನಾನು ಭದ್ರತೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.

    ಎಸ್​ಡಿಪಿಐಗೆ ಕೊಲ್ಲುವುದು ಹೊಸ ಸಂಗತಿಯೇನಲ್ಲ. ಎಸ್​ಡಿಪಿಐ ರಕ್ತದಲ್ಲಿ ಕೊಲೆ ಇದೆ. ಈ ಹಿಂದೆಯೂ ಮೈಸೂರಿನಲ್ಲಿ ಅನೇಕರನ್ನು ಇಂತಹ ಘಟನೆಗಳಿಗೆ ಈಡುಮಾಡಿದ್ದಾರೆ. ಇದೇನು ಬಹಳ ಹೊಸ ಸಂಗತಿಯೇನಲ್ಲ. ನಾವೆಲ್ಲ ಕಾಳಿಯನ್ನು ಪೂಜಿಸುವವರು. ಮೃತ್ಯುವನ್ನು ಆರಾಧಿಸುವರರು. ಹೀಗಾಗಿ ನಮಗೆ ಮೃತ್ಯ ಬಹಳ ದೊಡ್ಡ ಸಂಗತಿಯಲ್ಲ. ನಿಮ್ಮ ಈ ತರಹದ ಕೆಲಸಗಳಿಂದ ಭಯಭೀತರಾಗುವುದಿಲ್ಲ. ಇನ್ನು ಗಟ್ಟಿಯಾಗಿ ಕೆಲಸ ಮಾಡುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts