More

    ಆರ್‌ಸಿಬಿ ತಂಡದಲ್ಲಿ ಉಳಿಯಲು ಬಯಸಿದ್ದರು ಯಜುವೇಂದ್ರ ಚಾಹಲ್!

    ಮುಂಬೈ: ಕಳೆದ 8 ವರ್ಷಗಳಿಂದ ಆರ್‌ಸಿಬಿ ತಂಡದ ಪ್ರಮುಖ ಭಾಗವಾಗಿದ್ದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ಅವರು 6.5 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ಪಾಲಾಗಿದ್ದರು. ಆದರೆ ಈ ಸಲವೂ ಆರ್‌ಸಿಬಿ ತಂಡದ ಪರವಾಗಿ ಆಡುವುದೇ ತಮ್ಮ ಮೊದಲ ಆದ್ಯತೆಯಾಗಿತ್ತು. ಆ ತಂಡ ಮತ್ತು ಅದರ ಅಭಿಮಾನಿಗಳ ಜತೆಗೆ ಭಾವನಾತ್ಮಕ ನಂಟು ಇತ್ತು. ಬೇರೆ ಯಾವುದೇ ತಂಡದ ಪರ ಆಡುವ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಆರ್‌ಸಿಬಿ ತಂಡ ತಮ್ಮನ್ನು ರಿಟೇನ್ ಮಾಡಿಕೊಳ್ಳಲಿಲ್ಲ ಎಂದು ಆರ್‌ಸಿಬಿ ಪರ 113 ಪಂದ್ಯ ಆಡಿ 139 ವಿಕೆಟ್ ಕಬಳಿಸಿದ್ದ ಚಾಹಲ್ ಹೇಳಿದ್ದಾರೆ.

    ‘ಆರ್‌ಸಿಬಿ ತಂಡ ರಿಟೇನ್ ಆಗುವಿರಾ ಎಂದು ನನ್ನನ್ನು ಕೇಳಲೂ ಇಲ್ಲ. ಕೇಳಿದ್ದರೆ ನಾನು ಒಪ್ಪುತ್ತಿದ್ದೆ. ಹಣಕ್ಕಿಂತ ನನಗೆ ತಂಡದ ಜತೆಗಿನ ಬಾಂಧವ್ಯವೇ ಮುಖ್ಯವಾಗಿತ್ತು. ಆದರೆ ನನ್ನನ್ನು ರಿಟೇನ್ ಮಾಡಿಕೊಳ್ಳದೆ, ಹರಾಜಿನಲ್ಲಿ ಮರಳಿ ಖರೀದಿಸುವೆವು ಎಂದು ತಿಳಿಸಿದ್ದರು. ಹಣವೇ ಮುಖ್ಯವಾಯಿತೇ ಎಂದು ಆರ್‌ಸಿಬಿ ಫ್ಯಾನ್ಸ್ ಈಗಲೂ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಆರ್‌ಸಿಬಿ ತಂಡದಿಂದ ನನ್ನ ಜೀವನ ಸಾಕಷ್ಟು ಬದಲಾಗಿದೆ. ತಂಡದ ಅಭಿಮಾನಿಗಳೂ ಸಾಕಷ್ಟು ಪ್ರೀತಿ ನೀಡಿದ್ದರು’ ಎಂದು ಚಾಹಲ್ ವಿವರಿಸಿದ್ದಾರೆ.

    2010ರಲ್ಲಿ ನಾನು ಐಪಿಎಲ್‌ನಲ್ಲಿ ಮೊದಲ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯನಾಗಿದ್ದೆ. ಹೀಗಾಗಿ ಮತ್ತೆ ಅಲ್ಲಿಗೇ ಮರಳಿರುವ ಖುಷಿಯೂ ಇದೆ ಎಂದಿದ್ದಾರೆ. ಬಳಿಕ 2011ರಿಂದ 2013ರವರೆಗೆ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲೂ ಇದ್ದರು.

    ಆರ್‌ಸಿಬಿ ಸೋಲಿಗೆ ಕಾರಣ ವಿವರಿಸಿದ ನಾಯಕ ಫಾಫ್​ ಡು ಪ್ಲೆಸಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts