More

    ಜುಲೈ 30, 31 ರಂದು ಸಿಇಟಿ, ಸೆಪ್ಟೆಂಬರ್​ 1ರಂದು ಕಾಲೇಜು ಆರಂಭ

    ಬೆಂಗಳೂರು: ಇಂಜಿನಿಯರಿಂಗ್​ ಸೇರಿ ವೃತ್ತಿಪರ ಕೋರ್ಸ್​ಗಳಿಗೆ ನಡೆಸಲಾಗುವ 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕ ಘೋಷಿಸಲಾಗಿದೆ.

    ಜುಲೈ 30 ಹಾಗೂ 31ರಂದು ರಾಜ್ಯಾದ್ಯಂತ ಸಿಇಟಿ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಇದನ್ನೂ ಓದಿ; ಶಾಲೆಗಳು ಪುನರಾರಂಭವಾದಾಗ ಹೀಗಿದ್ದರೆ ಚೆನ್ನ..!

    ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಭ್ಯರ್ಥಿಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಹೀಗಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
    ಐಐಟಿ ಸೇರಿ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್​ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ಜೆಇಇ ಹಾಗೂ ವೈದ್ಯಕೀಯ ಕೋರ್ಸ್​ಗಳ ಆಯ್ಕೆಗೆ ನಡೆಸುವ ನೀಟ್​ಗೆ ಆಹಜರಾಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

    ಸಿಇಟಿಗೆ ಸಜ್ಜಾಗಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆರಂಭಿಸಲಾಗಿದ್ದ ‘ಗೆಟ್​, ಸೆಟ್​ ಗೋ’ ಕ್ರ್ಯಾಶ್​ ಕೋರ್ಸ್​ಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ ಎಂದು ಡಿಸಿಎಂ ಹರ್ಷ ವ್ಯಕ್ತಪಡಿಸಿದರು.

    ಇದನ್ನೂ ಓದಿ; ವಿಶಾಖಪಟ್ಟಣ ವಿಷಾನಿಲ ದುರಂತಕ್ಕೆ ಯಾರೂ ಕಾರಣರಲ್ಲ…! 

    ಕಾಲೇಜುಗಳಲ್ಲಿ ನೂತನ ಶೈಕ್ಷಣಿಕ ವರ್ಷಾರಂಭ ಸೆಪ್ಟೆಂಬರ್​ ಒಂದರಿಂದ ಆರಂಭವಾಗಲಿದೆ ಎಂದು ಅಶ್ವತ್ಥ ನಾರಾಯಣ್​ ತಿಳಿಸಿದರು.
    ವಿವರಗಳಿಗೆ https://cetonline.karnataka.gov.in/kea ಸಂಪರ್ಕಿಸಿ.

    ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts