More

    ಈ ವರ್ಷ ಆಫ್​ಲೈನ್​ನಲ್ಲೇ ನಡೆಯಲಿದೆ ಸಿಇಟಿ ದಾಖಲೆ ಪರಿಶೀಲನೆ; ರಾಜ್ಯದ 29 ಕೇಂದ್ರಗಳಲ್ಲಿ ಪ್ರಕ್ರಿಯೆ

    ಬೆಂಗಳೂರು: ಸಿಇಟಿ ವಿದ್ಯಾರ್ಥಿಗಳು ಈ ವರ್ಷ ಆನ್‌ಲೈನ್ ಬದಲಾಗಿ ಆಫ್​ಲೈನ್‌ನಲ್ಲೇ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಹಾಜರಾಗಬೇಕು. ಪ್ರತಿ ಬಾರಿ ಆನ್‌ಲೈನ್ ಮೂಲಕ ದಾಖಲೆ ಪರಿಶೀಲನೆ ವ್ಯವಸ್ಥೆ ಜಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾದರೂ ಹಲವು ಇಲಾಖೆಗಳ ಅಸಹಕಾರದಿಂದ ಅಲ್ಪ ಪ್ರಮಾಣದಲ್ಲಿ ಮಾತ್ರ ಆನ್‌ಲೈನ್ ವ್ಯವಸ್ಥೆ ಮಾಡುತ್ತಿತ್ತು. ಈ ಬಾರಿ ಸಂಪೂರ್ಣವಾಗಿ ಆಫ್​​ಲೈನ್‌ನಲ್ಲೇ ದಾಖಲೆ ಪರಿಶೀಲನೆ ನಡೆಸುತ್ತಿದೆ.

    ಈ ಬಾರಿಯ ದಾಖಲೆ ಪರಿಶೀಲನೆ ಸೆ.30ರಿಂದ ಅ.28ರವರೆಗೆ ನಡೆಯಲಿದೆ. ಮೊದಲ ರ‌್ಯಾಂಕ್​ನಿಂದ ಸಿಇಟಿ ಕೊನೆಯ ರ‌್ಯಾಂಕ್‌ವರೆಗೆ ಎಲ್ಲ ಅಭ್ಯರ್ಥಿಗಳು ರ‌್ಯಾಂಕ್ ಅನುಗುಣವಾಗಿ ರೂಪಿಸಿರುವ ವೇಳಾಪಟ್ಟಿ ಪರಿಶೀಲಿಸಿಕೊಂಡು ದಾಖಲೆಗಳ ಸಹಿತ ಸಹಾಯ ಕೇಂದ್ರಗಳಿಗೆ ಹಾಜರಾಗಬಹುದು.

    ಇದನ್ನೂ ಓದಿ: ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಮಗ; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ, ಪ್ರತಿಭಟನೆ

    ಕಳೆದ ವರ್ಷ ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿತ್ತು. ಆನಂತರ ಸೀಟು ಆಯ್ಕೆಯಾದ ಮೇಲೆ ದಾಖಲೆಗಳ ನೈಜತೆ ಪರಿಶೀಲನೆ ಮಾಡುತ್ತಿತ್ತು. ಆದರೆ, ಈ ಎಲ್ಲ ಪ್ರಕ್ರಿಯೆಗೆ ಕಳೆದ ವರ್ಷ ಎರಡೂವರೆ ತಿಂಗಳು ಸಮಯ ತೆಗೆದುಕೊಂಡಿದೆ.

    ಈ ವರ್ಷ ಸಿಇಟಿ ನಡೆದಿರುವುದೇ ವಿಳಂಬವಾಗಿದೆ. ಇನ್ನೂ ಆನ್‌ಲೈನ್‌ನಲ್ಲಿ ಅವಕಾಶ ನೀಡಿ ಮತ್ತೊಮ್ಮೆ ಆಫ್​​ಲೈನ್​ನಲ್ಲಿ ಪರಿಶೀಲನೆ ಮಾಡುವುದು ಕಷ್ಟದ ಕೆಲಸ ಮತ್ತು ಸಮಯ ವ್ಯರ್ಥವೆಂದು ಈ ಬಾರಿ ಸಂಪೂರ್ಣವಾಗಿ ಆಫ್​ಲೈನ್​ ಆಗಿ ಮಾಡಲಿದೆ.

    ಇದನ್ನೂ ಓದಿ: ಈತ ಇನ್ನು ಬೆಂಗಳೂರಲ್ಲಿ ಕಾಣಿಸಿಕೊಳ್ಳುವಂತಿಲ್ಲ; 10 ವರ್ಷಗಳಿಂದ ಅಬ್ಬರಿಸಿದವ ಇನ್ನೊಂದು ವರ್ಷ ರಾಜಧಾನಿಯಲ್ಲಿ ಇರುವಂತಿಲ್ಲ..

    ಅರ್ಜಿ ಸಲ್ಲಿಸುವ ವೇಳೆ ಏನೆಲ್ಲ ದಾಖಲೆಗಳನ್ನು ನಮೂದಿಸಲಾಗಿದೆಯೋ ಆ ಎಲ್ಲ ದಾಖಲೆಗಳ ನೈಜ ಪ್ರತಿಯನ್ನು ಮತ್ತು ಜತೆಗೆ ಎರಡು ಪ್ರತಿ ಜೆರಾಕ್ಸ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ರಾಜ್ಯದಲ್ಲಿ ಇದಕ್ಕಾಗಿ 29 ಕೇಂದ್ರಗಳನ್ನು ಗುರುತಿಸಲಾಗಿದೆ.

    ಇದನ್ನೂ ಓದಿ: ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್​; ಇತ್ತ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಸಸ್ಪೆಂಡ್..​

    ಸಂಪೂರ್ಣವಾಗಿ ದಾಖಲೆ ಪರಿಶೀಲನೆ ಪ್ರಕ್ರಿಯೆ ಆನ್‌ಲೈನ್ ಮಾಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ಆಫ್​ಲೈನ್​ ಮಾಡುತ್ತಿದ್ದೇವೆ. ಒಮ್ಮೆ ಕೇಂದ್ರಕ್ಕೆ ಬಂದು ಸಂಪೂರ್ಣ ಪ್ರಕ್ರಿಯೆ ಮುಗಿಸಿಕೊಂಡು ಹೋಗಬಹುದು.
    | ಎಸ್. ರಮ್ಯಾ ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

    ಕುಡುಕರ ಸೋಗಲ್ಲಿ ಹೋಗಿ ಆರೋಪಿಯನ್ನು ಬಂಧಿಸಿದ ಪೊಲೀಸ್; ಕೊನೆಗೂ 9 ವರ್ಷಗಳ ಬಳಿಕ ಸಿಕ್ಕಿಬಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts