More

    ಶಿವಣ್ಣನ ‘ಬೈರಾಗಿ’ ಟೀಸರ್ ಶೀಘ್ರದಲ್ಲೇ!

    ಬೆಂಗಳೂರು:ಸೆಂಚುರಿ ಸ್ಟಾರ್‌ಶಿವರಾಜ್‌ಕುಮಾರ್‌ ಮತ್ತು ಡಾಲಿ ಧನಂಜಯ್ ‘ಟಗರು’ ಚಿತ್ರದ ನಂತರ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ‘ಬೈರಾಗಿ’. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣವೀಗ ಮುಕ್ತಾಯವಾಗಿದೆ. ಈ ಖುಷಿಯ ವಿಚಾರವನ್ನು ಸ್ವತಃ ನಿರ್ದೇಶಕ ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.
    ಅಷ್ಟೇ ಅಲ್ಲದೆ ಸಂಕ್ರಾಂತಿ ಪ್ರಯುಕ್ತ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಚಿತ್ರದ ಹೊಸ ಪೋಸ್ಟರ್ ಸಹ ಬಿಡುಗಡೆ ಮಾಡಿ, ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದ್ದಾರೆ. ಇನ್ನೊಂದು ಸಪ್ರ್ರೈಸ್ ಸಹ ಚಿತ್ರದಿಂದ ಸಿಗಲಿದೆ ಎಂಬ ಸುಳಿವು ನೀಡಿದ್ದರಾದರೂ, ಅದೇನೂ ಎಂಬುದಕ್ಕೆ ಕೊಂಚ ಸಮಯವೂ ಬೇಕು ಎಂದಿದ್ದಾರೆ. ವಿಡಿಯೋ ಮೂಲಕ ಹಬ್ಬದ ಶುಭಾಶಯವನ್ನೂ ಕೋರಿದ್ದಾರೆ ಶಿವಣ್ಣ. 
    ಇತ್ತೀಚೆಗಷ್ಟೇ ಬೆಂಗಳೂರಿನ ಎರಡು ಕಡೆಗಳಲ್ಲಿ ವಿಶಿಷ್ಟ ಸೆಟ್‌ ಹಾಕಿ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು. ಅದರಲ್ಲೂ‘ ರಿದಂ ಆಫ್‌ ಶಿವಪ್ಪ’ ಎಂಬ ಹಾಡನ್ನು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಲಾಗಿತ್ತು. ದೇವನಹಳ್ಳಿಯಲ್ಲಿ ಗೋವಾ ಪುದುಚೇರಿ ಸೆಟ್ ನಿರ್ಮಿಸಿ ಹಾಡನ್ನು ಚಿತ್ರೀಕರಿಸಲಾಗಿತ್ತು. ಮೂರೂವರೆ ನಿಮಿಷಗಳ ಸಿಂಗಲ್ ಟೇಕ್ ಎಂಬುದು ಈ ಹಾಡಿನ ವಿಶೇಷತೆಯಲ್ಲೊಂದು. 

    ಶಿವಣ್ಣನ ‘ಬೈರಾಗಿ’ ಟೀಸರ್ ಶೀಘ್ರದಲ್ಲೇ! ಶಿವಣ್ಣನ ‘ಬೈರಾಗಿ’ ಟೀಸರ್ ಶೀಘ್ರದಲ್ಲೇ!

    ಟಗರುನಂತರ ಶಿವಣ್ಣ ಮತ್ತು ನಟ ರಾಕ್ಷಸ ಡಾಲಿ ಧನಂಜಯ್ ಮತ್ತೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಕಾರಣ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಅಭಿಮಾನಿಗಳಿಗೆ ಇದೆ. ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ್ ಅವರ ಲುಕ್‌ಗಳು ವಿಭಿನ್ನವಾಗಿವೆ. ಶಿವರಾಜ್‌ಕುಮಾರ್‌ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್‌ ಜೋಡಿಯಾಗಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿರುವ ಈ ಸಿನಿಮಾಗೆ ವಿಜಯ್‌ ಮಿಲ್ಟನ್‌ ನಿರ್ದೆಶನದ ಜತೆಗೆ ಸಿನಿಮಾಟೋಗ್ರಫಿಯನ್ನು ಮಾಡುತ್ತಿದ್ದಾರೆ.
    ಸಂಕ್ರಾಂತಿಯ ಸಂದರ್ಭದಲ್ಲಿ ಸಿನಿಮಾ ತಂಡ ಒಂದು ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರದ ಟೀಸರ್ ಸದ್ಯದಲ್ಲೇ ರಿಲೀಸ್ ಆಗಲಿದೆ ಎಂಬ ಮಾಹಿತಿ ನೀಡಿದೆ. ಇದು ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ.

    ನಟಿ ಅರ್ಚನಾ ಗೌತಮ್​ಗೆ ಕಾಂಗ್ರೆಸ್ ಎಂಎಲ್ಎ ಟಿಕೆಟ್, ಬಿಕಿನಿ ಫೋಟೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts