More

    ಮದ್ವೆ ಸೇರಿ ಇತರೆ ಉತ್ಸವಗಳಲ್ಲಿ ಸಿನಿಮಾ ಹಾಡಿನ ಬಳಕೆ ಕಾಪಿರೈಟ್​ ಉಲ್ಲಂಘನೆ ಆಗುವುದಿಲ್ಲ: ಕೇಂದ್ರ ಸ್ಪಷ್ಟನೆ

    ನವದೆಹಲಿ: ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಬಾಲಿವುಡ್​ ಸೇರಿದಂತೆ ಯಾವುದೇ ಸಿನಿಮಾ ಹಾಡುಗಳನ್ನು ಪ್ಲೇ ಮಾಡಿದರೆ ಅದು ಕಾಪಿರೈಟ್​ ಉಲ್ಲಂಘನೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ನಿರ್ದೇಶನ ಹೊರಡಿಸಿದೆ.

    ಅನೇಕ ಕಾರ್ಯಕ್ರಮಗಳಲ್ಲಿ ಹಿಂದಿ ಸಿನಿಮಾದ ಹಾಡುಗಳನ್ನು ಬಳಸಲಾಗುತ್ತಿದೆ ಎಂದು ಕಾಪಿರೈಟ್​ ಸೊಸೈಟಿಯಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ದೇಶನ ನೀಡಿದೆ.

    ಈ ಸಂಬಂಧ ಡಿಪಾರ್ಟ್​ಮೆಂಟ್​ ಫಾರ್​ ಪ್ರಮೋಷನ್​, ಇಂಡಸ್ಟ್ರಿ ಆ್ಯಂಡ್​ ಇಂಟರ್ನಲ್​ ಟ್ರೇಡ್​ (ಡಿಪಿಐಐಟಿ) ಇಲಾಖೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಅನೇಕ ಕಾರ್ಯಕ್ರಮಗಳಲ್ಲಿ ಸಿನಿಮಾ ಹಾಡುಗಳ ಪ್ರದರ್ಶನ ಹಿನ್ನೆಲೆಯಲ್ಲಿ ಕಾಪಿರೈಟ್​ ಸೊಸೈಟಿಗಳಿಂದ ರಾಯಧನವನ್ನು ಸಂಗ್ರಹಿಸುವ ಕುರಿತು ಸಾರ್ವಜನಿಕರಿಂದ ಮತ್ತು ಇತರ ಪಾಲುದಾರರಿಂದ ಹಲವಾರು ದೂರುಗಳು ಮತ್ತು ಕುಂದುಕೊರತೆಗಳನ್ನು ಸ್ವೀಕರಿಸಿದ್ದೇವೆ. 1957ರ ಕಾಪಿರೈಟ್​ ಆ್ಯಕ್ಟ್​ ಸೆಕ್ಷನ್ 52 (1) (za) ರ ಪ್ರಕಾರ ಮದುವೆ ಮತ್ತು ಇತರೆ ಸಮಾರಂಭಗಳಲ್ಲಿ ಸಿನಿಮಾ ಹಾಡುಗಳನ್ನು ಬಳಸುವುದು ಕಾಪಿರೈಟ್​ ಉಲ್ಲಂಘನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ನಡೆಯುತ್ತಿದೆ UFO ಸಂಬಂಧಿತ ವಿಚಾರಣೆ! ಗುಪ್ತಚರ ಅಧಿಕಾರಿ ಹೇಳಿದ್ದೇನು?

    ಇದಕ್ಕೆ ಉತ್ತರ ನೀಡಿರುವ ಡಿಪಿಐಐಟಿ, ಕೆಲವು ಕಾಯಿದೆಗಳೊಂದಿಗೆ ಸೆಕ್ಷನ್​ 52ರ ಕಾಯಿದೆ ವ್ಯವಹರಿಸುತ್ತದೆ. ಹೀಗಾಗಿ ಅದು ಕಾಪಿರೈಟ್​ ಉಲ್ಲಂಘನೆ ಆಗುವುದಿಲ್ಲ ಎಂದಿದೆ. ಸೆಕ್ಷನ್ 52 (1) (za) ನಿರ್ದಿಷ್ಟವಾಗಿ ಸಾಹಿತ್ಯಿಕ, ನಾಟಕ, ಸಂಗೀತ ಅಥವಾ ಯಾವುದೇ ಆಗಿರಲಿ ಧಾರ್ಮಿಕ ಸಮಾರಂಭ ಅಥವಾ ಮದುವೆಯಂತಹ ಅಧಿಕೃತ ಸಮಾರಂಭಗಳಲ್ಲಿ ಧ್ವನಿಮುದ್ರಣದ ಪ್ರದರ್ಶನವೂ ಕಾಪಿರೈಟ್​ ಉಲ್ಲಂಘನೆ ಆಗುವುದಿಲ್ಲ ಎಂದು ಡಿಪಿಐಐಟಿ ಹೇಳಿದೆ.

    ಕಾಪಿರೈಟ್​ ವಿಚಾರದಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಕಾಪಿರೈಟ್​ ಸೊಸೈಟಿ ಬೇಡಿಕೆ ಇಟ್ಟರೆ ಅದನ್ನು ಒಪ್ಪಿಕೊಳ್ಳಬೇಡಿ ಎಂದು ಡಿಪಿಐಐಟಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಬೇಡಿಕೆ ಇಟ್ಟಿದ್ದಲ್ಲಿ ಇದು ಸೆಕ್ಷನ್ 52 (1) (za) ಉಲ್ಲಂಘನೆ ಆಗಲಿದೆ ಎಂದಿದೆ. (ಏಜೆನ್ಸೀಸ್​)

    ಸೀಮಾ ಹೈದರ್​ಗೆ ನಕಲಿ ದಾಖಲೆಗಳನ್ನು ಮಾಡಿಕೊಟ್ಟ ಇಬ್ಬರು ಆರೋಪಿಗಳು ಅಂದರ್! ​

    ಹಾಡಿನ ಸೌಂಡ್​ ಕಡಿಮೆ ಮಾಡು ಎಂದಿದ್ದಕ್ಕೆ ವ್ಯಕ್ತಿಯ ಪ್ರಾಣ ತೆಗೆದು ಪರಾರಿಯಾದ..

    ವಿದ್ಯುತ್ ಅವಘಡದಿಂದ ಕೊಟ್ಟಿಗೆಯಲ್ಲಿದ್ದ 7 ಆಕಳುಗಳು ಸಜೀವ ದಹನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts