More

    ಆಗಸ್ಟ್​ 31ರವರೆಗೆ ಕೋವಿಡ್​ ಮಾರ್ಗಸೂಚಿ ವಿಸ್ತರಿಸಿದ ಕೇಂದ್ರ ಸರ್ಕಾರ: ಕಠಿಣ ಕ್ರಮಕ್ಕೆ ರಾಜ್ಯಗಳಿಗೆ ಸೂಚನೆ

    ನವದೆಹಲಿ: ಆಗಸ್ಟ್​ 31ರವರೆಗೆ ಕೋವಿಡ್​ 19 ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ವಿಸ್ತರಿಸಿದ್ದು, ಕರೊನಾ ಪಾಸಿಟಿವಿಟಿ ದರ ಅಧಿಕವಾಗಿರುವ ಜಿಲ್ಲೆಗಳಲ್ಲಿ ಸಾಧ್ಯವಾದಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.

    ಪಾಸಿಟಿವಿಟಿ ದರ ಹೆಚ್ಚಿದ್ದರೆ, ಅಲ್ಲಿ ಸೋಂಕಿನ ಹರಡುವಿಕೆ ಅಧಿಕವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

    ಈ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಭಲ್ಲ ಅವರು ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋವಿಡ್ -19 ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ ಕೋವಿಡ್ -19 ಪ್ರೋಟೋಕಾಲ್ ಅನ್ನು ಅನುಸರಿಸುವುದನ್ನು ಅಲಕ್ಷಿಸಬಾರದು ಎಂದಿದ್ದಾರೆ.

    ಎಲ್ಲ ಜನಸಂದಣಿ ಪ್ರದೇಶಗಳಲ್ಲಿ ಕೋವಿಡ್​ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮವಹಿಸಬೇಕು. ಅದರಲ್ಲೂ ಮುಂಬರುವ ತಿಂಗಳುಗಳಲ್ಲಿ ಸಾಲು ಸಾಲು ಹಬ್ಬಗಳು ಇರುವುದರಿಂದ ಹೆಚ್ಚು ನಿಗಾವಹಿಸಬೇಕು ಎಂದು ಅಜಯ್​ ಭಲ್ಲ ಅವರು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದಾರೆ.

    ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಾಣುತ್ತಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ರಮೇಣ ಚಟುವಟಿಕೆಗಳನ್ನು ಪುನಃ ತೆರೆಯುತ್ತಿವೆ. ಆದರೆ, ಕೆಲವು ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ವಿಸ್ತರಿಸಿ, ರಾಜ್ಯಗಳಿಗೂ ಸೂಚನೆ ನೀಡಿದೆ. (ಏಜೆನ್ಸೀಸ್​)

    ‘ಪ್ರಧಾನಿ ಸ್ಥಾನಕ್ಕೆ ಮಮತಾ ಬ್ಯಾನರ್ಜಿಯವರೇ ಬೆಸ್ಟ್!’ ದೀದಿಯನ್ನು ಹಾಡಿ ಹೊಗಳಿದ ಸಂಸದ

    ಒಂದು ಪ್ಲೇಟ್​ಗೆ 15 ಸಾವಿರ ರೂಪಾಯಿ! ಇದು ಭೂಮಿಯ ಅತ್ಯಂತ ದುಬಾರಿ ಫ್ರೆಂಚ್​ ಫ್ರೈಸ್​!

    ಐಸಿಸಿ ಟಿ-ಟ್ವೆಂಟಿ ರ್ಯಾಂಕಿಂಗ್: ಅಗ್ರ 10ರೊಳಗೆ ಸ್ಥಾನ ಉಳಿಸಿಕೊಂಡ ಕೊಹ್ಲಿ, ರಾಹುಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts