More

    ಕೋವಿಡ್​ ವಿರುದ್ಧ ಹೋರಾಡಲು 23 ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ​

    ನವದೆಹಲಿ: ಕರೊನಾ ಎರಡನೇ ಅಲೆಯಿಂದ ಉಂಟಾಗಿರುವ ಸಮಸ್ಯೆಗಳು ಮತ್ತು ಕೋವಿಡ್​ 19 ನಿರ್ಮೂಲನೆಗಾಗಿ ಬರೋಬ್ಬರಿ 23 ಸಾವಿರ ಕೋಟಿ ರೂ.ಗಳ ಬಹುದೊಡ್ಡ ಪರಿಹಾರ ಪ್ಯಾಕೇಜ್​ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.

    ಸಂಪುಟ ಪುನರಚನೆಯ ದಿನದ ಬೆನ್ನಲ್ಲೇ ಹೊಸ ಸಚಿವ ಸಂಪುಟದೊಂದಿಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ನಭೆಯ ಬಳಿಕ ನೂತನ ಆರೋಗ್ಯ ಸಚಿವ ಮನ್ಶುಕ್​ ಮಾಂಡವೀಯಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

    ಕರೊನಾ ಎರಡನೇ ಅಲೆಯಲ್ಲಿ ಉಂಟಾದ ಸಮಸ್ಯೆಗಳನ್ನು ಎದುರಿಸಲು ಮತ್ತು ಕೋವಿಡ್​ ನಿರ್ಮೂಲನೆಗೆ ತುರ್ತು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು 23,000 ಕೋಟಿ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬಳಸಲಿವೆ ”ಎಂದು ಮಾಂಡವಿಯಾ ಹೇಳಿದರು.

    ಕೇಂದ್ರದಿಂದ 15,000 ಕೋಟಿ ರೂ. ಮತ್ತು ರಾಜ್ಯಗಳಿಂದ 8,000 ಕೋಟಿ ರೂ. ಒದಗಿಸಲಾಗುತ್ತದೆ. ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಲು ದೇಶದ ಎಲ್ಲ 736 ಜಿಲ್ಲೆಗಳಲ್ಲಿ ಜಂಟಿಯಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುವುದೆಂದು ಮಾಂಡವೀಯಾ ಅವರು ತಿಳಿಸಿದರು.

    ನಾವು ಕೋವಿಡ್ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕಾಗಿದೆ. ಕ್ಯಾಬಿನೆಟ್ ಅನುಮೋದಿಸಿದ ಪರಿಹಾರ ಪ್ಯಾಕೇಜ್ ಅನ್ನು ಈ ವರ್ಷ ಜುಲೈನಿಂದ ಮಾರ್ಚ್ 2022 ರವರೆಗೆ ಕೇಂದ್ರ ಮತ್ತು ರಾಜ್ಯಗಳು ಕಾರ್ಯಗತಗೊಳಿಸಲಿವೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ರಾಜ್ಯಕ್ಕೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಮಾಂಡವೀಯಾ ಹೇಳಿದರು.

    ಮೂರನೇ ಅಲೆಯ ಭೀತಿಯ ಮಧ್ಯೆ, ಸುಮಾರು 2.4 ಲಕ್ಷ ಸಾಮಾನ್ಯ ವೈದ್ಯಕೀಯ ಹಾಸಿಗೆಗಳು ಮತ್ತು 20,000 ಐಸಿಯು ಹಾಸಿಗೆಗಳನ್ನು ರಚಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಅದರಲ್ಲಿ ಶೇಕಡಾ 20 ರಷ್ಟು ಮಕ್ಕಳಿಗೆ ವಿಶೇಷವಾಗಿ ಮೀಸಲಿಡಲಾಗುವುದೆಂದು ತಿಳಿಸಿದರು. (ಏಜೆನ್ಸೀಸ್​)

    ಜು.20ರೊಳಗೆ ದ್ವಿತೀಯ ಪಿಯು ಫಲಿತಾಂಶ ಬಿಡುಗಡೆಗೆ ನಿರ್ಧಾರ: ಎಸ್ಸೆಸ್ಸೆಲ್ಸಿ-ಪಿಯು ಅಂಕ ಪರಿಶೀಲನೆಗೆ ಅವಕಾಶ

    ಮಾಜಿ ಕ್ರಿಕೆಟಿಗ, ಬಿಸಿಸಿಐ ಮಾಜಿ ಮುಖ್ಯಸ್ಥ ಈಗ ಮೋದಿ ಸಂಪುಟದಲ್ಲಿ ಕ್ರೀಡಾ ಸಚಿವ

    ಕರ್ನಾಟಕದ ‘ಸಿಂಗಂ’ ಕೆ. ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts