More

    ರಾಜ್ಯಗಳಿಗೆ ಉಚಿತ ಲಸಿಕೆ ನೀಡಲು ಕೇಂದ್ರಕ್ಕೆ ಬೇಕು 50,000 ಕೋಟಿ ರೂಪಾಯಿ

    ನವದೆಹಲಿ: ಎಲ್ಲ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡಲು ಲಸಿಕೆಯನ್ನು ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಈ ಲಸಿಕೆ ಪೂರೈಕೆಗೆ ಸುಮಾರು 50,000 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಆರ್ಥಿಕ ಸಚಿವಾಲಯದ ಮೂಲಗಳು ತಿಳಿಸಿವೆ.

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಪ್ರತಿ ರಾಜ್ಯಗಳಿಗೆ ಕೇಂದ್ರವು ಜೂನ್ 21ರಿಂದ ಲಸಿಕೆ ಪೂರೈಕೆ ಮಾಡಲಿದೆ. ಅದಕ್ಕೆ 50,000 ಕೋಟಿ ರೂಪಾಯಿ ಖರ್ಚಾಗಲಿದೆ. ಸದ್ಯದ ಮಟ್ಟಿಗೆ ಕೇಂದ್ರದ ಬಳಿ ಹಣವಿದೆ. ಹಣಕ್ಕಾಗಿ ಯಾವುದೇ ಪೂರಕ ವ್ಯವಸ್ಥೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮುಂಬರುವ ಹಂತಕ್ಕೆ ಪೂರಕ ವ್ಯವಸ್ಥೆಯ ಅವಶ್ಯಕತೆ ಬೀಳಬಹುದು ಎಂದು ತಿಳಿಸಲಾಗಿದೆ.

    ಸೋಮವಾರದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಲಸಿಕೆ ತಯಾರಕಾ ಸಂಸ್ಥೆಗಳಿಂದ ರಾಜ್ಯ ಸರ್ಕಾರಗಳ ಶೇ. 25 ಕೋಟಾ ಸೇರಿ ಒಟ್ಟು ಶೇ. 75 ಲಸಿಕೆಯನ್ನು ಕೇಂದ್ರವೇ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದು ತಿಳಿಸಿದ್ದರು. ಇನ್ನು ಶೇ. 25 ಲಸಿಕೆಯನ್ನು ಖಾಸಗಿ ವಲಯಗಳು ಖರೀದಿಸಬಹುದು ಮತ್ತು ಡೋಸೇಜ್​ಗೆ ಗರಿಷ್ಠ 150 ರೂಪಾಯಿಯಂತೆ ಮಾರಾಟ ಮಾಡಬಹುದು ಎಂದು ಹೇಳಿದ್ದರು. (ಏಜೆನ್ಸೀಸ್)

    ಖತರ್ನಾಕ್​ ಲೇಡಿಯ ಒಂದೇ ಒಂದು ಮಾತಿಗೆ ಮರುಳಾಗಿ 80 ಲಕ್ಷ ರೂ. ನೀಡಿದವನಿಗೆ ಕಾದಿತ್ತು ಬಿಗ್​ ಶಾಕ್​!

    ಪಕ್ಕದಲ್ಲಿ ಮದುಮಗನಿರುವಾಗ್ಲೇ ಕ್ಯಾಮೆರಾದತ್ತ ಮದುಮಗಳ ಸಿಗ್ನಲ್‌ ಪಾಸ್‌- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts