More

    ಪಿಒಕೆಯಲ್ಲಿರುವ ಅನಧಿಕೃತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಬೇಡ ಎಂದ ಕೇಂದ್ರ

    ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ, ಭಾರತ ಸರ್ಕಾರದಿಂದ ಅನುಮೋದಿತವಲ್ಲದ ಕಾಲೇಜು ಹಾಗೂ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಬಾರದೆಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
    ಇಲ್ಲಿನ ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟವಾದ ಸಾರ್ವಜನಿಕ ಪ್ರಕಟಣೆಯಲ್ಲಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪಿಒಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಅನುಮೋದಿತವಲ್ಲದ ತಾಂತ್ರಿಕ ಸಂಸ್ಥೆಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಶಿಕ್ಷಕರೆ, ಕ್ವಾರಂಟೈನ್​ನಲ್ಲಿ ಮನರಂಜಿಸಲು ಹೋಗಿ ಎಂದ ರಾಜಸ್ಥಾನ

    “ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ಭಾರತದ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ ಮತ್ತು ಪಿಒಜೆಕೆಯಲ್ಲಿರುವ ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿಲ್ಲ ಅಥವಾ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಎಐಸಿಟಿಇ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ದಂತಹ ಶಾಸನಬದ್ಧ ಅಧಿಕಾರಗಳಿಂದ ಅಂಗೀಕರಿಸಲ್ಪಟ್ಟಿಲ್ಲ ಎಂದು ತಿಳಿಸಿದೆ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವಾಸ್ತುಶಿಲ್ಪ, ಪಟ್ಟಣ ಯೋಜನೆ, ಫಾರ್ಮಸಿ, ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ, ಅನ್ವಯಿಕ ಕಲೆಗಳು, ಕರಕುಶಲ ಕಲೆ ಮತ್ತು ವಿನ್ಯಾಸ, ಮ್ಯಾನೇಜ್​​ಮೆಂಟ್, ಕಂಪ್ಯೂಟರ್ ಅಪ್ಲಿಕೇಶನ್‌ ಮತ್ತು ಪ್ರವಾಸೋದ್ಯಮ ಕೋರ್ಸ್‌ಗಳಿಗೆ ಇಲ್ಲಿಯ ಯಾವುದೇ ಕಾಲೇಜು, ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ.

    ನವೀಕೃತ ವೀಸಾದೊಂದಿಗೆ ಭಾರತಕ್ಕೆ ಬರಲು ವಿದೇಶಿ ವ್ಯಾಪಾರಿಗಳಿಗೆ ಷರತ್ತುಬದ್ಧ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts