More

    ಕರೊನಾ ಸೋಂಕಿನ ಲಕ್ಷಣ ಇದ್ಯಾ?: ಹಾಗಿದ್ರೆ ಏನ್​ ಮಾಡ್ಬೇಕು ಅಂತ ಸಚಿವರು ಹೇಳಿದ್ದಾರೆ, ನೋಡಿ…

    ನವದೆಹಲಿ: ಕರೊನಾ ಸೋಂಕು ತಡೆ ಹಿನ್ನೆಲೆಯಲ್ಲಿ ಮೇಲಿಂದ ಮೇಲೆ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುವ ಕೇಂದ್ರ ಸರ್ಕಾರ ಮಂಗಳವಾರ ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಆಯುರ್ವೇದ ಹಾಗೂ ಯೋಗದ ಮೂಲಕ ಹೇಗೆ ಕೋವಿಡ್​-19 ಪ್ರಕರಣ ನಿರ್ವಹಿಸಬಹುದು ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಮಂಗಳವಾರ ಶಿಷ್ಟಾಚಾರವೊಂದನ್ನು ಬಿಡುಗಡೆ ಮಾಡಿದ್ದಾರೆ.

    ದ ನ್ಯಾಷನಲ್​ ಕ್ಲಿನಿಕಲ್​ ಮ್ಯಾನೇಜ್​ಮೆಂಟ್​ ಪ್ರೊಟೊಕಾಲ್​ ಎಂಬ ಇದನ್ನು ಕೇಂದ್ರ ಆರೋಗ್ಯ ಇಲಾಖೆ ಹಾಗೂ ಆಯುಷ್​ ಸಚಿವಾಲಯ ಜಂಟಿಯಾಗಿ ಹೊರತಂದಿದ್ದು, ಸಾಂಪ್ರದಾಯಿಕವಾಗಿ ಕೋವಿಡ್​-19 ನಿರ್ವಹಿಸುವ ನಿಟ್ಟಿನಲ್ಲಿ ಇದು ನೆರವಾಗಲಿದೆ. ಇದುವರೆಗಿನ ಕೋವಿಡ್​-19 ನಿರ್ವಹಣೆಯಲ್ಲಿ ಆಯುರ್ವೇದ ಹಾಗೂ ಯೋಗ ಪ್ರಮುಖ ಪಾತ್ರ ವಹಿಸಿದ್ದು ಸಾಬೀತಾಗಿದೆ. ಜನತೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮತ್ತು ಶ್ವಾಸಕೋಶ ಕಾರ್ಯನಿರ್ವಹಣೆ ಪರಿಣಾಮಕಾರಿ ಆಗಿಸಿಕೊಳ್ಳುವಲ್ಲಿ ಆಯುರ್ವೇದ ತಜ್ಞರು ಸೂಕ್ತ ಸಲಹೆ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಶಿಷ್ಟಾಚಾರವನ್ನು ಐಸಿಎಂಆರ್​ ಹಾಗೂ ಸಿಎಸ್​ಐಆರ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ತಿಳಿಸಿದ್ದಾರೆ.

    ಶಿಷ್ಟಾಚಾರದಲ್ಲಿನ ಸಲಹೆಗಳು ಈ ಕೆಳಗಿನಂತಿವೆ.
    * ರೋಗಲಕ್ಷಣ ರಹಿತ ಅಥವಾ ಲಘು ಲಕ್ಷಣವಿರುವ ಸೋಂಕಿತರಿಗೆ..
    1. ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು. ತ್ರಿಫಲದೊಂದಿಗೆ ಕುದಿಸಿದ ಉಗುರು ಬೆಚ್ಚಗಿನ ನೀರಿನಿಂದಲೂ ಬಾಯಿ ಮುಕ್ಕಳಿಸಬಹುದು.
    2. ಮೂಗಿನ ಹೊಳ್ಳೆಗಳಿಗೆ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿಕೊಳ್ಳಿ. ದಿನಕ್ಕೆ ಒಮ್ಮೆ ಅಥವಾ ಎರಡು ಸಲ ದನದ ತುಪ್ಪವನ್ನೂ ಮೂಗಿಗೆ ಹಚ್ಚಿಕೊಳ್ಳಬಹುದು.
    3. ಜೀರಿಗೆ, ಪುದಿನಾ ಎಲೆ ಅಥವಾ ಯುಕಾಲಿಪ್ಟಸ್​ ಆಯಿಲ್​ ಬೆರೆಸಿದ ಬಿಸಿನೀರಿನ ಹಬೆಯನ್ನು ದಿನಕ್ಕೊಮ್ಮೆ ತೆಗೆದುಕೊಳ್ಳುವುದು.
    4. ಬರೀ ಬಿಸಿನೀರು ಇಲ್ಲವೆ ಶುಂಠಿ, ಕೊತ್ತಂಬರಿ ಅಥವಾ ಜೀರಿಗೆ ಹಾಕಿ ಕುದಿಸಿದ ನೀರನ್ನು ಕುಡಿಯುತ್ತಿರಿ.
    5. ಅರಿಶಿಣ ಬೆರೆಸಿದ ಹಾಲನ್ನು ರಾತ್ರಿ ಕುಡಿಯಿರಿ. ಅಜೀರ್ಣ ಸಮಸ್ಯೆ ಇದ್ದರೆ ಬೇಡ.
    6. ಆಯುಷ್​ ಕಧಾ ಅಥವಾ ಕ್ವಾಥ್ ದಿನಕ್ಕೊಮ್ಮೆ ಕುಡಿಯಿರಿ.

    * ಗಂಭೀರ ಲಕ್ಷಣಗಳಿದ್ದಲ್ಲಿ..
    1. ಜ್ವರ, ಮೈಕೈ ನೋವು, ತಲೆನೋವು: ನಗರಾದಿ ಕಷಾಯ 20 ಮಿ.ಲೀ.ನಂತೆ ದಿನಕ್ಕೆರಡು ಸಲ ಕುಡಿಯಿರಿ.
    2. ಕೆಮ್ಮು: ಜೇನುತುಪ್ಪದೊಂದಿಗೆ ಸೀತಾಫಲಾದಿ ಚೂರ್ಣವನ್ನು ದಿನಕ್ಕೆ 3 ಸಲ ಸೇವಿಸಿ.
    3. ರುಚಿ ಇಲ್ಲದಿರುವುದು ಹಾಗೂ ಗಂಟಲು ಕೆರೆತ: ವ್ಯೋಷಾದಿ ವಾಟಿ ಗುಳಿಗೆಗಳನ್ನು 1 ಅಥವಾ 2 ಚೀಪುವುದು.
    4. ಸುಸ್ತು: ಹತ್ತು ಗ್ರಾಂ ಚ್ಯವನಪ್ರಾಶವನ್ನು ಉಗುರು ಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಬೆರೆಸಿ ದಿನಕ್ಕೊಮ್ಮೆ ಸೇವಿಸಿ.
    5. ಹೈಪಾಕ್ಸಿಯಾ (ಆಮ್ಲಜನಕ ಕೊರತೆ): ಹತ್ತು ಗ್ರಾಂ ವಾಸವಲೇಹ ಬಿಸಿನೀರಿನಲ್ಲಿ ಹಾಕಿ ಸೇವಿಸಿ.
    6. ಅತಿಸಾರ: ಗುಟಜ ಘನ ವಾಟಿ, 500 ಮಿ.ಗ್ರಾಂ. ಗುಳಿಗೆಯನ್ನು ದಿನಕ್ಕೆ ಮೂರು ಸಲ ಸೇವಿಸಿ.
    7. ಉಸಿರಾಟದ ಸಮಸ್ಯೆ: ಹತ್ತು ಮಿ.ಲೀ. ಕನಕಸವವನ್ನು ಅಷ್ಟೇ ನೀರಿನಲ್ಲಿ ಹಾಕಿ ದಿನಕ್ಕೆ ಎರಡು ಸಲ ಸೇವಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts