More

    ಪಂಚ ರಾಜ್ಯಗಳಿಗೆ ಐವತ್ತು ಸಿಪಿಸಿಬಿ ತಂಡ.. ಪರಿಸರದ ಮೇಲೆ ತೀವ್ರ ನಿಗಾ.. ಯಾಕೆ?

    ನವದೆಹಲಿ: ದೆಹಲಿಯೂ ಸೇರಿ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಐವತ್ತು ತಂಡಗಳನ್ನು ನಿಯೋಜಿಸಿದ್ದು, ಪರಿಸರದ ಮೇಲೆ ತೀವ್ರ ನಿಗಾ ಇಡುವಂತೆ ಅವುಗಳಿಗೆ ಸೂಚಿಸಿದೆ. ಅಷ್ಟಕ್ಕೂ ಆ ತಂಡಗಳು ಯಾವ್ಯಾವು, ಯಾವ್ಯಾವ ರಾಜ್ಯಗಳಿಗೆ ಅವುಗಳನ್ನು ನಿಯೋಜಿಸಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

    ಕೇಂದ್ರ ಪರಿಸರ ಸಚಿವ ಪ್ರಕಾಶ್​ ಜಾವಡೇಕರ್​ ಅವರು ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್​ ಮತ್ತು ಹರಿಯಾಣ ರಾಜ್ಯಗಳ ಸಚಿವರು ಹಾಗೂ ಇಲಾಖಾ ಮುಖ್ಯಸ್ಥರ ಜತೆ ಸಭೆ ನಡೆಸಿದ ಬಳಿಕ ಈ ವಿಷಯವನ್ನು ಘೋಷಿಸಿದ್ದಾರೆ.

    ಕೂಳೆ ಸುಡುವುದರ ಮೇಲೆ ನಿಗಾ ಇರಿಸಲು ಹಾಗೂ ಪರಿಸರ ಮಾಲಿನ್ಯಕ್ಕೆ ತಡೆವೊಡ್ಡಲು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ (ಸಿಪಿಸಿಬಿ)ಯ 50 ತಂಡಗಳನ್ನು ನಿಯೋಜಿಸಲಾಗಿದ್ದು, ಈ ಐದು ರಾಜ್ಯಗಳಲ್ಲಿ ಅವು ತೀವ್ರ ನಿಗಾ ಇಡಲಿವೆ. ನವೆಂಬರ್​ ಸಮಯಕ್ಕೆ ಪರಿಸರ ಮಾಲಿನ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts