More

    ಈ ಮೂರು ರಾಜ್ಯಗಳಲ್ಲಿ ಕರೊನಾ ಹೆಚ್ಚುತ್ತಿರುವ ಬಗ್ಗೆ ಕೇಂದ್ರದ ಕಳವಳ

    ನವದೆಹಲಿ: ಅತಿಹೆಚ್ಚು ಹೊಸ ಕರೊನಾ ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತಿರುವ ಮಹಾರಾಷ್ಟ್ರ, ಛತ್ತೀಸ್ಗಡ ಮತ್ತು ಪಂಜಾಬ್ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ಹೊಂದಿರುವುದಾಗಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

    “ದೇಶದ ಶೇ.58 ರಷ್ಟು ಆ್ಯಕ್ಟೀವ್ ಪ್ರಕರಣಗಳು ಮತ್ತು ಶೇ.34 ರಷ್ಟು ಕರೊನಾ ಸಾವುಗಳು ಮಹಾರಾಷ್ಟ್ರ ಒಂದರಿಂದಲೇ ವರದಿಯಾಗುತ್ತಿವೆ” ಎಂದು ತಿಳಿಸಿರುವ ಕಾರ್ಯದರ್ಶಿಗಳು, ಮಹಾರಾಷ್ಟ್ರದಲ್ಲಿ ಕಳೆದ ವಾರ ಕೇವಲ ಶೇ.60 ರಷ್ಟು ಪರೀಕ್ಷೆಗಳು ಆರ್​ಟಿ-ಪಿಸಿಆರ್​​ ವಿಧಾನದ ಮೂಲಕ ನಡೆದಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಎಲ್ಲಾ ರಾಜ್ಯಗಳಿಗೂ ಆರ್​ಟಿ-ಪಿಸಿಆರ್​ ಪರೀಕ್ಷೆಗಳ ಉಪಯೋಗವನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಇಂದಿನಿಂದ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ

    ಸೋಮವಾರದಂದು ಭಾರತದಾದ್ಯಂತ 96,982 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 47,288 ಪ್ರಕರಣಗಳು ಮಹಾರಾಷ್ಟ್ರದಿಂದ, 7,302 ಪ್ರಕರಣಗಳು ಛತ್ತೀಸಗಡದಿಂದ ವರದಿಯಾಗಿವೆ. ಒಟ್ಟು 446 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿದ್ದು, 164 ಜನರು ಮಹಾರಾಷ್ಟ್ರದಲ್ಲಿ ಮತ್ತು 72 ಜನರು ಪಂಜಾಬ್​ನಲ್ಲಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)

    ಬಾಲಿವುಡ್​ ತಾರೆ ಕತ್ರೀನಾ ಕೈಫ್​​ಗೆ ಕರೊನಾ

    18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯಗೊಳಿಸಿ, ಅಲ್ಪಾವಧಿ ಲಾಕ್​ಡೌನ್ ವಿಧಿಸಿ : ಐಎಂಎ

    ಅಮಿತ್ ಷಾ-ಆದಿತ್ಯನಾಥರ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ಬೆದರಿಕೆ

    ಅಮಿತ್ ಷಾ-ಆದಿತ್ಯನಾಥರ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts