More

    ‘ಕರೊನಾ ವೈರಸ್​ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕಾಮನ್​ಸೆನ್ಸ್​ ಇಲ್ಲ…ನನಗೂ ಕೆಮ್ಮು, ಜ್ವರ ಬರ್ತಿದೆ…’

    ರಾಮನಗರ: ಕರೊನಾ ವೈರಸ್​ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

    ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಡಿಕಲ್ ಚೇರ್ಮನ್​ಗಳ ಸಭೆ ನಡೆಸಿ, ಎಲ್ಲಿಂದ, ಯಾರಿಗೆ ವೈರಸ್ ಬರುತ್ತಿದೆ? ಯಾರು ಹೊರಗಡೆಯಿಂದ ಬರುತ್ತಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಿಸಬೇಕು. ಅದು ಬಿಟ್ಟು ಹಳ್ಳಿಯಲ್ಲಿ ಕೆಮ್ಮಿದವರನ್ನು ಚೆಕ್​ ಮಾಡಿ ಆತಂಕ ಸೃಷ್ಟಿಸಲಾಗುತ್ತಿದೆ. ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ಜ್ಞಾನ ಇಲ್ಲ ಎಂದರು.

    ಕರೊನಾ ಸಂಬಂಧಪಟ್ಟಂತೆ ವಿಶೇಷ ಬಜೆಟ್​ ತಯಾರು ಮಾಡಬೇಕು. ರೈತರಿಗೆ ತುಂಬ ನಷ್ಟವಾಗುತ್ತಿದೆ. ಕೋಳಿಗಳನ್ನು 20 ರೂ.ಗೂ ಖರೀದಿಸುತ್ತಿಲ್ಲ. 10ರೂ.ಗೂ ತರಕಾರಿ ಕೊಳ್ಳುತ್ತಿಲ್ಲ. ಈಗ ಎಲ್ಲ ಬಂದ್​ ಮಾಡಿದ್ದಾರಲ್ಲ, ಬ್ಯಾಂಕ್​ನವರೂ ಬಡ್ಡಿಯನ್ನು ನಿಲ್ಲಿಸಬೇಕು ಎಂದು ಹೇಳಿದರು.

    ಫೋನ್​ನಲ್ಲಿ ನೂರು ಸಲ ಕರೆ ಮಾಡಿದರೂ ಕೆಮ್ಮು ಬರುತ್ತದೆ. ಅದನ್ನು ಕೇಳುತ್ತಿದ್ದರೆ ಎಲ್ಲರಿಗೂ ಕೆಮ್ಮು ಬರುತ್ತದೆ. ನನಗೂ ಕೆಮ್ಮು, ಜ್ವರ ಬರುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಚಾರಕ್ಕೋಸ್ಕರ ಕೆಲಸ ಮಾಡುವುದನ್ನು ಬಿಡಿ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಮತ್ತೆ ಏರಿತು ಕರೊನಾ ಸೋಂಕಿತರ ಸಂಖ್ಯೆ; 107 ಜನರಲ್ಲಿ ಸೋಂಕು ಪತ್ತೆ

    ಪ್ರಾಣಿ ಪ್ರಿಯ ದರ್ಶನ್​ ಅಭಿಮಾನಿಯಿಂದ ಹುಚ್ಚಾಟ; ದರ್ಶನ್​ಗೆ ಹಾವಿನ ಹಾರ ಹಾಕಿದ ಅಭಿಮಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts