More

    ಕೇಂದ್ರದ ಸಬ್ಸಿಡಿ ಕಡಿತ: ಎಲೆಕ್ಟ್ರಿಕ್​ ಸ್ಕೂಟರ್ ದುಬಾರಿ..!

    ದೆಹಲಿ: ಎಲೆಕ್ಟ್ರಿಕ್​ ಸ್ಕೂಟರ್​ ತೆಗೆದುಕೊಳ್ಳುವವರಿಗೆ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದೆ. ಇಂದಿನಿಂದ ಎಲೆಕ್ಟ್ರಿಕ್​ ಸ್ಕೂಟರ್​ ದರಗಳಲ್ಲಿ ಬೆಲೆ ಏರಿಕೆ ಕಂಡುಬರುವ ಸಾಧ್ಯತೆಯಿದೆ.

    ಇದನ್ನೂ ಓದಿ: ಮೇಕೆದಾಟು ಯೋಜನೆ ಕುರಿತು ಆಕ್ರಮಣಕಾರಿ ವರ್ತನೆ ಬಿಡಿ; ಡಿಕೆಶಿಗೆ ತಮಿಳುನಾಡು ಸಚಿವ ಕಿವಿಮಾತು

    ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ನೀಡುತ್ತಿದ್ದ ಫೇಮ್​-2 ಸಬ್ಸಿಡಿಯನ್ನು ಕಡಿತಗೊಳಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ ಎಲೆಕ್ಟ್ರಿಕ್ ವಾಹನಗಳ ದರದಲ್ಲಿ ಭಾರೀ ಬದಲಾವಣೆಯಾಗಲಿದೆ. ಈ ಮೊದಲು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಾಕಷ್ಟು ಸಬ್ಸಿಡಿ ನೀಡಲಾಗಿತ್ತು, ಹಾಗಾಗಿ ಕಂಪನಿಗಳು ಬೆಲೆಯನ್ನು ಹೆಚ್ಚಿಸಿರಲಿಲ್ಲ.

    ಸದ್ಯ, ಕೇಂದ್ರವು ಗರಿಷ್ಠ ಸಬ್ಸಿಡಿ ಮಿತಿಯನ್ನು ಶೇ.40ರಿಂದ ಶೇ.15ಕ್ಕೆ ಇಳಿಸಿದೆ. ಹಾಗಾಗಿ ಬಜಾಜ್ ಆಟೋ, ಹೀರೋ ಮೋಟೋಕಾರ್ಪ್(ವಿಡಾ), ಟಿವಿಎಸ್ ಮೋಟಾರ್ಸ್ ಮತ್ತು ಟಾರ್ಕ್ ಮೋಟಾರ್ಸ್. ಓಲಾ ಮುಂತಾದ ಕಂಪನಿಗಳು ಬೆಲೆ ಏರಿಕೆಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts