ಕರೊನಾ ವೈರಸ್ ವಿರುದ್ಧ ಎಲ್ಲರೂ ಒಂದಾಗೋಣ, ಭಾನುವಾರ ರಾತ್ರಿ ಒಂಬತ್ತಕ್ಕೆ ಒಂಬತ್ತು ನಿಮಿಷಗಳ ಕಾಲ ದೀಪ ಬೆಳಗೋಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ, ದೇಶಾದ್ಯಂತ ಅದ್ಭುತ ಸ್ಪಂದನೆ ಸಿಕ್ಕಿದೆ. ಇದಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು ಸಹ ಹೊರತಾಗಿಲ್ಲ.
ಭಾನುವಾರ ರಾತ್ರಿ ಹಲವು ಸೆಲೆಬ್ರಿಟಿಗಳು ತಮ್ಮ ಮೆನಯ ಮುಂದೆ ದೀಪ ಬೆಳಗುವ ಮೂಲಕ ಕರೊನಾ ವೈರಸ್ ವಿರುದ್ಧ ಏಕತೆಯ ಹೋರಾಟ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರಾದ ಶಿವರಾಜಕುಮಾರ್, ರಮೇಶ್ ಅರವಿಂದ್, ಗಣೇಶ್, ಹರಿಪ್ರಿಯಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಮೇಘನಾ ರಾಜ್, ಶ್ರೀಮುರಳಿ, ಸುಮಲತಾ ಅಂಬರೀಶ್, ವಸಿಷ್ಠ ಸಿಂಹ, ಸುಧಾರಾಣಿ ಸೇರಿದಂತೆ ನೂರಾರು ಸೆಲೆಬ್ರಿಟಿಗಳು ದೀಪ ಬೆಳಗಿದ್ದಾರೆ.
ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಮಾತ್ರವಲ್ಲ, ಭಾರತೀಯ ಚಿತ್ರರಂಗದ ಹಲವು ಕಲಾವಿದರು ಮನೆಯ ಮುಂದೆ ದೀಪ ಬೆಳಗಿ, ಪ್ರಧಾನ ಮಂತ್ರಿಗಳು ನೀಡಿದ ಕರೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಬಿಗ್ ಬಿ’ ಅಮಿತಾಭ್ ಬಚ್ಚನ್, ಚಿರಂಜೀವಿ, ರಜನಿಕಾಂತ್, ಅಕ್ಷಯ್ ಕುಮಾರ್, ಹೇಮಾ ಮಾಲಿನಿ, ಅಭಿಷೇಕ್ ಬಚ್ಚನ್, ತಮನ್ನಾ ಭಾಟಿಯಾ, ಅನೂಷ್ಕಾ ಶರ್ಮ, ದೀಪಿಕಾ ಪಡುಕೋಣೆ ಮುಂತಾದವರು ದೀಪ ಬೆಳಗುವ ಮೂಲಕ ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ.