More

    ಭಕ್ತಿಯಿಂದ ರಂಜಾನ್ ಆಚರಣೆ – ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ

    ವಿಜಯಪುರ: ಮುಸ್ಲಿಂ ಸಮುದಾಯದ ವಿಶೇಷ ಹಾಗೂ ಪವಿತ್ರ ಆಚರಣೆಗಳಲ್ಲೊಂದಾದ ಈದ್-ಉಲ್-ಫೀತರ್ ( ರಂಜಾನ್ ) ಹಬ್ಬವನ್ನು ಶನಿವಾರ ಸಡಗರದಿಂದ ಆಚರಿಸಲಾಯಿತು.

    ಕಳೆದೊಂದು ತಿಂಗಳಿನಿಂದ ಉಪವಾಸ, ಸಾಮೂಹಿಕ ಪ್ರಾರ್ಥನೆ, ದಾನ ಮತ್ತಿತದ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡಿದ್ದ ಮುಸ್ಲಿಂರು ಶನಿವಾರ ಚಂದ್ರನ ದರ್ಶನದೊಂದಿಗೆ ಉಪವಾಸ ಆಚರಣೆ ಅಂತಿಮಗೊಳಿಸಿದರು. ಬೆಳಗ್ಗೆಯಿಂದಲೇ ಸಾಮೂಹಿಕ ಪ್ರಾರ್ಥನೆಗಾಗಿ ಈದ್ಘಾಗಳತ್ತ ಹೆಜ್ಜೆ ಹಾಕಿದ ಮುಸ್ಲಿಂರು ಹೊಸ ಬಟ್ಟೆ ತೊಟ್ಟು, ಕಣ್ಣಿಗೆ ಪವಿತ್ರ ಸುರಮಾ ಹಚ್ಚಿಕೊಂಡು, ಅತ್ತರ್ (ವಿಶೇಷ ಬಗೆಯ ಸುಗಂಧ ದ್ರವ್ಯ) ಹಾಕಿಕೊಂಡು ಪ್ರಾರ್ಥನೆ ಸಲ್ಲಿಸಿದರು.

    ಧರ್ಮಗುರುಗಳಿಂದ ವಿಶೇಷ ಉಪನ್ಯಾಸ ಆಲಿಸಿದ ಬಳಿಕ ಪರಸ್ಪರ ಹಬ್ಬದ ಶುಭಾಶಯ ಕೋರುತ್ತಾ ಮನೆಯತ್ತ ಧಾವಿಸಿದರು. ಬಗೆ ಬಗೆಯ ಭಕ್ಷ್ಯ-ಭೋಜನಗಳನ್ನು ಸಿದ್ಧಪಡಿಸಿ ಕುಟುಂಬಸ್ಥರು ಒಟ್ಟಾಗಿ ಸೇವಿಸುವುದರ ಜೊತೆಗೆ ಬಡ-ಬಗ್ಗರಿಗೆ, ದೀನ-ದಲಿತರಿಗೆ ನೀಡಿ ಅವರ ಸಂತೋಷದಲ್ಲಿ ಅಲ್ಲಾನನ್ನು ಕಾಣುವ ಪ್ರಯತ್ನ ಮಾಡಿದರು. ಮಸಾಲೆ ಪದಾರ್ಥ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಮೊದಲಾದವುಗಳನ್ನೊಳಗೊಂಡ ಹಾಲಿನ ವಿಶೇಷ ಪಾನೀಯ (ಶಿರಕುರಮಾ)ವನ್ನು ಹಂಚಿದರು.

    ವಿಜಯಪುರದ ಐತಿಹಾಸಿಕ ದಖನಿ ಈದ್ಗಾ, ಶಾಹಿ ಆಲಂಗೀರ ಈದ್ಗಾ, ಜಾಮೀಯಾ ಮಸೀದಿ, ನವಾಬ್ ಮಸಜೀದ್, ಬುಖಾರಿ ಮಸಜೀದ್, ನೌ ಗುಂಬಜ್, ದಾತರಿ ಮಸಜೀದ್ ಮುಂತಾದ ಕಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಯಾಯಿತು. ಹಬ್ಬದ ಹಿನ್ನೆಲೆ ಅಂಗಡಿ ಮುಂಗಟ್ಟುಗಳನ್ನು ಬಂದ್‌ಗೊಳಿಸಿದ್ದರಿಂದ ನಗರದ ಪ್ರಮುಖ ಬೀದಿಗಳೆಲ್ಲ ಬಿಕೋ ಎನ್ನುತ್ತಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts