More

    ರಂಜಾನ್ ಮನೆಯಲ್ಲೇ ಆಚರಿಸಿ: ರಾಜ್ಯ ಸರ್ಕಾರದ ಸೂಚನೆ

    ಬೆಂಗಳೂರು: ಕರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಈ ಬಾರಿ ಮನೆಯಲ್ಲಿದ್ದುಕೊಂಡೆ ಆಚರಿಸಬೇಕೆಂದು ಮುಸ್ಲಿಮರಿಗೆ ರಾಜ್ಯ ಸರ್ಕಾರ ತಿಳಿಸಿದೆ.

    ಪ್ರಾರ್ಥನೆ, ಉಪವಾಸ, ಇಫ್ತಾರ್‌ಗಳನ್ನು ಮನೆಯಲ್ಲೇ ನಡೆಸಿ. ಇಡೀ ದೇಶ ಈ ಕರೊನಾ ಸಂಕಷ್ಟದಿಂದ ಪಾರಾಗಲು ಅಲ್ಲಾನಲ್ಲಿ ಪ್ರಾರ್ಥಿಸಿ ಎಂದು ಹಜ್ ಮತ್ತು ವಕ್ಫ ಸಚಿವ ಪ್ರಭು ಚವ್ಹಾಣ್ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

    ಶುಕ್ರವಾರದ ನಮಾಜ್ ಯಾವುದೇ ಕಾರಣಕ್ಕೂ ಮಸೀದಿಗೆ ತೆರಳಿ ಸಾಮೂಹಿಕವಾಗಿ ಸೇರಿ ಮಾಡಬಾರದು. ಮಸೀದಿಯಲ್ಲಿರುವ ಪೇಶ್ ಇಮಾಮ್ಸ್, ಮೌಜನ್ಸ್ ಹಾಗೂ ಸಿಬ್ಬಂದಿಗಳು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಬೇಕು ಎಂದಿದ್ದಾರೆ.

    ಇದನ್ನೂ ಓದಿ ಅಂತರ ಜಿಲ್ಲಾ ಸಂಚಾರಕ್ಕೆ ಬೇಕಿಲ್ಲ ಪಾಸ್​; ಬಸ್​, ರೈಲು, ವಿಮಾನ ಪ್ರಯಾಣಕ್ಕೆ ಈ ನಿಯಮ ಪಾಲನೆ ಕಡ್ಡಾಯ 

    ರಾಜ್ಯದ ಎಲ್ಲ ಮಸೀದಿಗಳಲ್ಲಿ ರಂಜಾನ್‌ಗೆ ಸಂಬಂಧಪಟ್ಟ ಪ್ರಾರ್ಥನೆ, ಸಹ್ರಿ, ಉಪವಾಸ ಹಾಗೂ ಇಫ್ತಾರ್ ಎಲ್ಲವನ್ನು ಮನೆಯಲ್ಲೇ ಆಚರಿಸಲು ತಿಳಿಸಲಾಗಿದೆ. ಹಸ್ತ ಲಾಘವ , ತಬ್ಬಿಕೊಂಡು ಶುಭ ಕೋರುವುದನ್ನು ಕೂಡ ಮಾಡಬೇಡಿ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದ ವಕ್ಫ ಕೌನ್ಸಿಲ್, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ನೀಡಿರುವ ನಿರ್ದೇಶನದ ಪ್ರಕಾರ ರಂಜಾನ್ ತಿಂಗಳಲ್ಲಿ ಸಾಮೂಹಿಕವಾಗಿ ಸಭೆ ಸೇರುವುದು, ಪ್ರಾರ್ಥನೆ ಮಾಡುವುದು, ಮಜ್ಲಿಸ್, ಮಸೀದಿಯಲ್ಲಿ ಇಫ್ತಾರ್ ಸೇರುವುದನ್ನು ನಿಷೇಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ, ಕರ್ನಾಟಕ ರಾಜ್ಯ ವಕ್ಫ ಮಂಡಳಿಯಿಂದಲೂ ಆದೇಶ ಹೊರಡಿಸಲಾಗಿದೆ.

    ಇದನ್ನೂ ಓದಿ ಬುಕಿಂಗ್​ಗೂ ಮುನ್ನ ಯೋಚಿಸಿ, ವಿಮಾನದಲ್ಲಿ ವ್ಯಕ್ತಿಗತ ಅಂತರ ಸಾಧ್ಯವಿಲ್ಲ, ಸೀಟು ಖಾಲಿ ಬಿಡಲ್ಲ 

    ಊರಿಗೆ ಹೋಗೋರು ಈಗ್ಲೇ ಪ್ಲಾನ್​ ಮಾಡ್ಕೊಳಿ, ಶನಿವಾರವೇ ಹೊರಡುತ್ತೆ ಲಾಸ್ಟ್​ ಬಸ್​, ಭಾನುವಾರ ಸಂಪೂರ್ಣ ಬಂದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts