More

    ಭಾರತೀಯ ಸೇನಾ ನೆಲೆಗಳ ಮೇಲೆ ಪಾಕ್​ ದಾಳಿ; ಮತ್ತೆ ಕದನ ವಿರಾಮ ಉಲ್ಲಂಘನೆ…

    ಜಮ್ಮು: ಲೈನ್​ ಆಫ್​ ಕಂಟ್ರೋಲ್​ನಲ್ಲಿ ಆಗಾಗ ನಿಯಂತ್ರಣ ಮೀರಿ ಕೆಣಕುವ ಪ್ರಯತ್ನ ಮಾಡುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಕಾಲು ಕೆದರಿಕೊಂಡು ಮುಂದೆ ಬಂದು ಭಾರತೀಯ ಯೋಧರ ಕೆಣಕಲು ಯತ್ನಿಸಿದೆ.

    ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್​ ಜಿಲ್ಲೆಯ ಲೈನ್​ ಆಫ್​ ಕಂಟ್ರೋಲ್​ನಲ್ಲಿರುವ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದೆ.

    ಸಂಜೆ 5.30ರ ಸುಮಾರಿಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ಪೂಂಛ್​ ಜಿಲ್ಲೆಯ ಎಲ್​ಒಸಿಯಲ್ಲಿನ ಖಸ್ಬಾ, ಕಿರ್ನಿ ಮತ್ತು ಷಹಾಪುರ್ ಸೆಕ್ಟರ್​ಗಳಲ್ಲಿ ಅಪ್ರಚೋದಿತವಾಗಿ ದಾಳಿ ನಡೆಸಿದ್ದು, ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್​ ದೇವೆಂದರ್​ ಆನಂದ್ ತಿಳಿಸಿದ್ದಾರೆ.

    ಈ ವರ್ಷದಲ್ಲಿ ಪಾಕಿಸ್ತಾನ ಸುಮಾರು 3,190 ಸಲ ಕದನ ವಿರಾಮ ಉಲ್ಲಂಘಿಸಿದ್ದು, ನೂರಕ್ಕೂ ಅಧಿಕ ಜನ ಗಾಯಗೊಂಡಿದ್ದು, 24 ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts