More

    ಸಿಬಿಎಸ್​ಇ ಕೈಬಿಟ್ಟಿರುವ ಪಠ್ಯಗಳು ಇವೇ ನೋಡಿ, ಅದಕ್ಕೆ ವ್ಯಕ್ತವಾಗುತ್ತಿದೆ ಭಾರಿ ಟೀಕೆ

    ನವದೆಹಲಿ: ಕೋವಿಡ್​-19 ಪಿಡುಗಿನಿಂದಾಗಿ ದೇಶಾದ್ಯಂತ ಶಾಲೆ-ಕಾಲೇಜುಗಳು ಬಂದ್​ ಆಗಿವೆ. ಪಿಡುಗು ಕಡಿಮೆಯಾದ ನಂತರ ಶಾಲೆಗಳು ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಆದರೂ ಶಾಲೆಗಳು ಆನ್​ಲೈನ್​ನಲ್ಲಿ ತರಗತಿಗಳನ್ನು ಆರಂಭಿಸಿವೆ. 9-12ನೇ ತರಗತಿಗಳ ಮಕ್ಕಳ ಮೇಲಿನ ಶೈಕ್ಷಣಿಕ ಭಾರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಪಠ್ಯವನ್ನು ಶೇ.30 ಕಡಿಮೆ ಮಾಡಿ ಮಂಗಳವಾರ ಆದೇಶ ಹೊರಡಿಸಿತ್ತು.

    ಇದೀಗ ಕಡಿತಗೊಳಿಸಿರುವ ಪಠ್ಯಗಳ ಭಾಗ ಯಾವುವು ಎಂಬುದು ಬಹಿರಂಗವಾಗಿದೆ. ಸರ್ಕಾರದ ಆದೇಶದ ಪ್ರಕಾರ ಈ ಬಾರಿ ಮಕ್ಕಳು ರಾಷ್ಟ್ರೀಯತೆ, ಪೌರತ್ವ, ನೋಟು ಅಮಾನ್ಯೀಕರಣ, ಸೇರಿ ಹಲವು ಪ್ರಮುಖ ಪಠ್ಯಗಳನ್ನು ಕೈಬಿಡಲಾಗಿದೆ. ಈ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

    ಪರಿಷ್ಕೃತ ಪಠ್ಯದ ಪ್ರಕಾರ 10ನೇ ತರಗತಿಯ ಮಕ್ಕಳು ಪ್ರಜಾತಂತ್ರ ವ್ಯವಸ್ಥೆ, ವಿವಿಧತೆ, ಲಿಂಗ, ಧರ್ಮ ಮತ್ತು ಜಾರಿ, ಜನಪ್ರಿಯ ಹೋರಾಟಗಳು ಮತ್ತು ಚಳವಳಿಗಳು, ಪ್ರಜಾತಂತ್ರ ವ್ಯವಸ್ಥೆಗಳ ಸವಾಲುಗಳು ಎಂಬ ಪಠ್ಯಗಳನ್ನು ಓದುವಂತಿಲ್ಲ.

    ಇದನ್ನೂ ಓದಿ: ಧೋನಿ ಕಂಪನಿಯಿಂದ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಸಾವಯವ ಗೊಬ್ಬರ!

    11ನೇ ತರಗತಿ ಮಕ್ಕಳು ಒಕ್ಕೂಟ ವ್ಯವಸ್ಥೆ, ಪೌರತ್ವ, ರಾಷ್ಟ್ರೀಯತೆ, ಜಾತ್ಯತೀತತೆ ಮತ್ತು ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಉಗಮ ಸೇರಿ ಹಲವು ಪಠ್ಯಗಳನ್ನು ಕಲಿಯುವಂತಿಲ್ಲ.

    ಅದರಂತೆ 12ನೇ ತರಗತಿ ಮಕ್ಕಳು ನೆರೆಹೊರೆ ರಾಷ್ಟ್ರಗಳಾದ ಪಾಕಿಸ್ತಾನ, ಮ್ಯಾನ್ಮಾರ್​, ಬಾಂಗ್ಲಾದೇಸ, ಶ್ರೀಲಂಕಾ ಮತ್ತು ನೇಪಾಳದೊಂದಿಗಿನ ಭಾರತದ ಸಂಬಂಧಗಳು, ಆರ್ಥಿಕ ಪ್ರಗತಿ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು, ಭಾರತದಲ್ಲಿನ ಸಾಮಾಜಿಕ ಚಳವಳಿಗಳು ಮತ್ತು ನೋಟು ಅಮಾನ್ಯೀಕರಣ ಸೇರಿ ಇನ್ನೂ ಹಲವು ಪಠ್ಯಗಳನ್ನು ಓದುವುದಿಲ್ಲ.

    4 ತಿಂಗಳ ಬಳಿಕ ಕ್ರಿಕೆಟ್​ ಶುರು, ಬುಕ್ಕಿಗಳ ಮೇಲೆ ಸಿಸಿಬಿ ‘ಐ’ ಅಲರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts