More

    ಈ ವರ್ಷ ಶೇ. 25 ಮಾರ್ಕ್ಸ್​ ಪಡೆದರೂ ಪಾಸ್​? ಇಲ್ಲಿದೆ ನೋಡಿ ಪ್ರಕಟಣೆಯ ಅಸಲಿಯತ್ತು

    ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ನಿಜ ಸುದ್ದಿ ಹರಿದಾಡುವಷ್ಟೇ ಸುಳ್ಳು ಸುದ್ದಿಗಳೂ ಹರಿದಾಡುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ಒಂದು ಸುದ್ದಿ ಭಾರಿ ವೈರಲ್​ ಆಗಿತ್ತು. ಲಾಕ್​ಡೌನ್​ ಹಿನ್ನೆಲೆಯಲ್ಲಿ ತರಗತಿಗಳನ್ನು ನಡೆಸಲಾಗದ ಕಾರಣ, ಸಿಬಿಎಸ್​ಇ ಮಂಡಳಿ ತನ್ನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್​ ಆಗಲು ಬೇಕಾದ ಅಂಕವನ್ನು ಪರಿಷ್ಕರಿಸಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವರ್ಷ ಶೇ. 35 ಅಲ್ಲ ಬರೀ ಶೇ. 25 ಅಂಕ ಬಂದರೂ ವಿದ್ಯಾರ್ಥಿಗಳು ಪಾಸ್​ ಆಗಲಿದ್ದಾರೆ ಎನ್ನಲಾಗಿತ್ತು. ಈ ಪ್ರಕಟಣೆಯ ಅಸಲಿತ್ತೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ‘ಕರೊನಾ ಭೀತಿಯಿಂದ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿಲ್ಲದವರಿಗೆ ಮತ್ತೊಂದು ಅವಕಾಶವಿಲ್ಲ’

    ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಫ್ಯಾಕ್ಟ್​ಚೆಕ್​ ತಂಡವು ಈ ವಿಚಾರದ ಸತ್ಯತೆಯನ್ನು ಹೊರಗೆಳೆದಿದೆ. ಶೇ. 25 ಅಂಕ ತೆಗೆದರೂ ವಿದ್ಯಾರ್ಥಿಗಳು ಪಾಸ್​ ಆಗಲಿದ್ದಾರೆ ಎಂದು ಸಿಬಿಎಸ್​ಇ ಹೇಳಿಯೇ ಇಲ್ಲ. ಆದರೂ ಅಂತದ್ದೊಂದು ಎಡಿಟೆಡ್​ ಪ್ರಕಟಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಅದು ವೈರಲ್​ ಆಗಿದೆ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಸಲುವಾಗಿ ಇಂತಹ ಕುತಂತ್ರವನ್ನು ಯಾರೋ ದುಷ್ಕರ್ಮಿಗಳು ಮಾಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಶಿವಮೊಗ್ಗದಲ್ಲಿ ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಸ್ಫೋಟದ ಭೀಕರತೆ

    ಅದರ ಜತೆ ಸಿಬಿಎಸ್​ಇ 12 ಮತ್ತು 10 ನೇ ತರಗತಿಯ ಪರೀಕ್ಷಾ ದಿನಾಂಕವನ್ನು ಬದಲಿಸಿಯೂ ಪ್ರಕಟಣೆಯನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಲಾಗಿದೆ. ಆದರೆ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ತಿಳಿಸಿದಂತೆ ಮೇ 4ರಿಂದ ಜೂನ್​ 10ರವರೆಗೆ ಸಿಬಿಎಸ್​ಇ ಪರೀಕ್ಷೆ ನಡೆಯಲಿದೆ. (ಏಜೆನ್ಸೀಸ್​)

    ಮೋದಿ ಸರ್ಕಾರದಲ್ಲಿ ಡಬಲ್​ ಆದ ಸೆನ್ಸೆಕ್ಸ್​! ಏಳೇ ವರ್ಷದಲ್ಲಿ 25 ಸಾವಿರದಿಂದ 50 ಸಾವಿರಕ್ಕೆ ಜಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts