More

    ಸಿಬಿಎಸ್​ಇ 10, 12ನೇ ತರಗತಿ ಎಕ್ಸಾಂ ಡೇಟ್​ ಫಿಕ್ಸ್​; ಆಫ್​ಲೈನ್​ನಲ್ಲೇ ನಡೆಯಲಿದೆ ಪರೀಕ್ಷೆ

    ನವದೆಹಲಿ: ಸಿಬಿಎಸ್​ಇ ಪಠ್ಯಕ್ರಮದಲ್ಲಿ 10 ಮತ್ತು 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ. ಈ ಕುರಿತಾಗಿ ಕೇಂದ್ರ ಶಿಕ್ಷಣ ಸಚಿವರಾದ ಡಾ. ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ಅವರು ಟ್ವಿಟ್ಟರ್​ನಲ್ಲಿ ಮಾತನಾಡಿದ್ದು, ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ಶಾಲೆಯಲ್ಲಿ ಕೂರುವ ಸೀಟಿಗಾಗಿ ಜಗಳ; ಕ್ಲಾಸ್​ ರೂಂನಲ್ಲೇ ನಡೆಯಿತು ಮಾರಣ ಹೋಮ!

    ಮೇ 4ರಿಂದ ಜೂನ್​ 10ರವರೆಗೆ ಸಿಬಿಎಸ್​ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದೆ. ಪ್ರಾಕ್ಟಿಕಲ್​ ಪರೀಕ್ಷೆಗಳು ಮಾರ್ಚ್​ 1ರಿಂದಲೇ ಆರಂಭವಾಗಲಿದೆ. ಜುಲೈ 15ಕ್ಕೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಎಲ್ಲ ಪರೀಕ್ಷೆಯನ್ನು ಆಫ್​ಲೈನ್​ನಲ್ಲಿಯೇ ನಡೆಸಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.

    ನಮ್ಮ ದೇಶ ಕರೊನಾ ಹಿನ್ನೆಲೆಯಲ್ಲಿ ಆನ್​ಲೈನ್​ ಶಿಕ್ಷಣಕ್ಕೆ ಬದಲಾಗಿದೆ. ಅದಕ್ಕಾಗಿ ಹಗಲಿರುಳು ದುಡಿದಿರುವ ಶಿಕ್ಷಕ ವೃಂದಕ್ಕೆ ಅವರು ಧನ್ಯವಾದವನ್ನು ಅರ್ಪಿಸಿದ್ದಾರೆ. ಒನ್​ ಕ್ಲಾಸ್​ ಒನ್​ ಚಾನೆಲ್​ ಮೂಲಕ ದೇಶದ ವಿದ್ಯಾರ್ಥಿಗಳಿಗೆ ಮನೆಯ ಟಿವಿಗಳಲ್ಲೇ ಶಿಕ್ಷಣ ಸಿಗುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ!

    ಈ ಹಿಂದೆ ಸಿಬಿಎಸ್​ಇ ಪರೀಕ್ಷೆಯ ಬಗ್ಗೆ ಮಾತನಾಡಿದ್ದ ಅವರು, ಫೆಬ್ರವರಿ ಒಳಗೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕರೊನಾ ಸ್ಥಿತಿಗತಿಯನ್ನು ಅವಲೋಕಿಸಿ ಪರೀಕ್ಷೆಯ ದಿನಾಂಕವನ್ನು ನಿರ್ಧರಿಸುವುದಾಗಿ ತಿಳಿಸಿದ್ದರು. (ಏಜೆನ್ಸೀಸ್​)

    ಪ್ರವಾಸಿ ಮಹಿಳೆಯನ್ನೇ ರೇಪ್​ ಮಾಡಿದ ಆಟೋ ಡ್ರೈವರ್​! ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿ ಸೆರೆ

    ಹೆಂಡತಿಯ ಸೀಮಂತಕ್ಕೆ ಸಿದ್ಧತೆ ನಡೆಸುತ್ತಿದ್ದ ಗಂಡ ರಸ್ತೆಯಲ್ಲೇ ಬಲಿಯಾದ! ಮಗನ ಜತೆ ತಾಯಿಯೂ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts