More

    ಸುಶಾಂತ್ ಕೇಸ್: ರಿಯಾ, ಶೌವಿಕ್​ಗೆ ಮಂಪರು ಪರೀಕ್ಷೆ?

    ಸುಶಾಂತ್ ಸಿಂಗ್ ರಜಪೂತ್ ಕೇಸ್‍ನಲ್ಲಿ ಸತತವಾಗಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರನನ್ನು ಗ್ರಿಲ್ ಮಾಡುತ್ತಿದೆ ಸಿಬಿಐ. ಈಗಾಗಲೇ ಶುಕ್ರವಾರ 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದ ಸಿಬಿಐ, ಇಂದು ಸಹ ಡಿಆರ್‍ಡಿಓ ಹೌಸ್‍ಗೆ ವಿಚಾರಣೆಗೆಂದು ಕರೆಸಿಕೊಂಡಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ‘ಸಿಂಬಾ’, ‘ಗೋಲ್​ಮಾಲ್​ ಅಗೇನ್​’ ಮರುಬಿಡುಗಡೆ

    ಈ ಮಧ್ಯೆ, ಸುಶಾಂತ್ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಿಕೊಂಡಿರುವ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಮುಂತಾದವರನ್ನು ಪಾಲಿಗ್ರಾಫ್ ಟೆಸ್ಟ್‍ಗೆ ಗುರಿಪಡಿಸಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

    ಈ ಕುರಿತು ಸದ್ಯಕ್ಕೆ ಯಾವುದೇ ಖಚಿತ ಮಾಹಿತಿ ಇಲ್ಲದಿದ್ದರೂ, ರಿಯಾ ಮತ್ತು ಇತರರ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತಿರುವ ಕಾರಣ, ನಿಜಾಂಶ ತಿಳಿಯುವುದಕ್ಕೆ ಈ ಅಸ್ತ್ರವನ್ನು ಸಿಬಿಐ ಪ್ರಯೋಗಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಹಾಗೇನಾದರೂ ಆದರೆ, ಸದ್ಯದಲ್ಲೇ ರಿಯಾ, ಶೌವಿಕ್ ಮುಂತಾದವರನ್ನು ದೆಹಲಿಗೆ ಕರೆಸಿಕೊಂಡು, ಅಲ್ಲಿ ಪ್ರಯೋಗಾಲಯದಲ್ಲಿ ಅವರ ಮೇಲೆ ಪಾಲಿಗ್ರಾಫ್ ಟೆಸ್ಟ್ ನೆಡಸಲಾಗುತ್ತದಂತೆ.

    ಇದನ್ನೂ ಓದಿ: ‘ತಪ್ಪು ಮಾಡಿದವರ ಬೆತ್ತಲೆ ಮಾಡಿ..’ ಎಂದ ಹಿರಿಯ ನಟ ಜಗ್ಗೇಶ್​; 2017ರ ಒಂದು ಘಟನೆಯನ್ನೂ ಬಿಚ್ಚಿಟ್ಟರು !

    ಈ ಮಧ್ಯೆ, ಮಾಧ್ಯಮದವರಿಂದ ತಮಗೆ ರಕ್ಷಣೆ ಕೊಡಬೇಕು ಎಂದು ರಿಯಾ ಮತ್ತು ಇತರರು ಮುಂಬೈನ ಸಾಂತಾಕ್ರೂಜ್‍ನ ಪೊಲೀಸರ ಮೊರೆಹೋದ ಕಾರಣ, ಅವರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts