More

    ಪ್ರಧಾನಿಯವರ ಪ್ರಿನ್ಸಿಪಲ್ ಸೆಕ್ರೆಟರಿ ಹೆಸರಲ್ಲಿ ಫೇವರ್ ಕೇಳಿ ಕರೆ: ಪ್ರಕರಣ ಸಿಬಿಐಗೆ ಹಸ್ತಾಂತರ

    ನವದೆಹಲಿ: ಪ್ರಧಾನಮಂತ್ರಿಯವರ ಪ್ರಿನ್ಸಿಪಲ್ ಸೆಕ್ರೆಟರಿ ಪಿ.ಕೆ.ಮಿಶ್ರಾ ಅವರ ಹೆಸರು ಹೇಳಿದ ವ್ಯಕ್ತಿಯೊಬ್ಬ, ಪುದುಚೇರಿಯ ಮಾಹೆಯಲ್ಲಿರುವ ಪ್ರಾದೇಶಿಕ ಆಡಳಿತಾಧಿಕಾರಿಗೆ ಕರೆ ಮಾಡಿ ಫೇವರ್ ಕೇಳಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಗುರುತು ಪತ್ತೆಯಾಗದ ವ್ಯಕ್ತಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ ಎಂದು ಪಿಎಂಒ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ಕರೆ ಸ್ವೀಕರಿಸಿದ ಆಡಳಿತಾಧಿಕಾರಿ ಹೆಸರು ಅಮನ್ ಶರ್ಮಾ. ಅವರಿಗೆ ಗುರುತಿಲ್ಲದ ನಂಬರ್​ನಿಂದ ಕರೆ ಬಂದಿದ್ದು, ನಾನು ಪ್ರಧಾನಿಯವರ ಪ್ರಿನ್ಸಿಪಲ್ ಸೆಕ್ರೆಟರಿ ಪಿ.ಕೆ.ಮಿಶ್ರಾ ಮಾತನಾಡುತ್ತಿದ್ದೇನೆ. ನನ್ನ ಮಗಳು JIPMERನಲ್ಲಿ ಕಲಿಯುತ್ತಿದ್ದು, ಸ್ವಲ್ಪ ಫೇವರ್ ಆಗಬೇಕಾಗಿದೆ ಎಂದು ಕೇಳಿಕೊಂಡಿದ್ದ.

    ಈ ಸಂಬಂಧ ಅಮನ್ ಶರ್ಮಾ ಅವರು ಪಿಎಂಒ ಕಚೇರಿಯನ್ನು ಸಂಪರ್ಕಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಪಿಎಂಒ ಆದೇಶ ನೀಡಿದೆ.ಈ ಘಟನೆ ನಡೆದು ಎರಡೂವರೆ ತಿಂಗಳಾಗಿದ್ದು, ಅನಾಮಧೇಯನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಅಪರಾಧಿಕ ಪಿತೂರಿ, ವಂಚನೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts