More

    ಉದ್ಯೋಗ, ಊಟವಿಲ್ಲದೆ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು, ದಿನಗೂಲಿ ಕೆಲಸಗಾರರ ಸಹಾಯಕ್ಕೆ ನಿಂತ ಸಿಬಿಐ ಅಧಿಕಾರಿಗಳು

    ನವದೆಹಲಿ: ಲಾಕ್​​ಡೌನ್​ನಿಂದ ಸಂಕಷ್ಟಕ್ಕೀಡಾಗಿರುವ ವಲಸೆ ಕಾರ್ಮಿಕರ ಸಹಾಯಕ್ಕೆ ಸಿಬಿಐ ಅಧಿಕಾರಿಗಳು ನಿಂತಿದ್ದಾರೆ.

    ಚೆನ್ನೈ, ಬೆಂಗಳೂರು, ಹೈದರಾಬಾದ್​ ಸೇರಿ ಎಲ್ಲ ಶಾಖೆಗಳ ಅಧಿಕಾರಿಗಳೂ ದಿನಗೂಲಿ ಕೆಲಸಗಾರರಿಗೆ, ವಲಸೆ ಕಾರ್ಮಿಕರಿಗೆ ಅಕ್ಕಿ-ಬೇಳೆ, ಮತ್ತಿತರ ಆಹಾರಗಳನ್ನು ಒದಗಿಸುತ್ತಿದ್ದಾರೆ. ಕೆಲಸಗಳಿಲ್ಲದೆ ಕಷ್ಟಪಡುತ್ತಿರುವ ಅನೇಕ ವಲಸೆ ಕಾರ್ಮಿಕರು, ದಿನಗೂಲಿ ಕೆಲಸಗಾರರಿಗೆ ದೇಶದ ಹಲವೆಡೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಅಧಿಕಾರಿಗಳು ಅಂತಹ ಆಶ್ರಯ ತಾಣಗಳಿಗೆ ಹೋಗಿ ನೆರವು ನೀಡುತ್ತಿದ್ದಾರೆ ಎಂದು ಸಿಬಿಐ ವಕ್ತಾರ ಆರ್​.ಕೆ.ಗೌರ್​ ತಿಳಿಸಿದ್ದಾರೆ.

    ಲಾಕ್​ಡೌನ್​ ಘೋಷಣೆಯಾಗಿದ್ದರಿಂದ ವಲಸೆ ಕಾರ್ಮಿಕರು, ದಿನಗೂಲಿ ಕೆಲಸಗಾರರು ಅಕ್ಷರಶಃ ನಿರುದ್ಯೋಗಿಗಳಾಗಿದ್ದಾರೆ. ತಮ್ಮ ಸ್ವಂತ ಊರಿಗೆ ಹೋಗಲಾಗದೆ, ಕೆಲಸ ಮಾಡುವಲ್ಲೂ ಇರಲಾರದೆ ಪರಿತಪಿಸುತ್ತಿದ್ದ ಅಂಥವರಿಗಾಗಿ ದೇಶಾದ್ಯಂತ ಒಟ್ಟು 23,000 ಆಶ್ರಯ ತಾಣಗಳು, ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂಥ ಬಡ ಕಾರ್ಮಿಕರಿಗೆ ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts