More

    1400 ಕೋಟಿ ರೂ. ವಂಚನೆ ಆರೋಪ: ಐಸ್​ ಕ್ರೀಮ್​ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

    ನವದೆಹಲಿ: ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಐಸ್​ಕ್ರೀಮ್​ ತಯಾರಿಕಾ ಕ್ವಾಲಿಟಿ ಲಿಮಿಟೆಡ್​ ಕಂಪನಿ ವಿರುದ್ಧ ಸಿಬಿಐ ಸೋಮವಾರ ವಂಚನೆ ಪ್ರಕರಣ ದಾಖಲಿಸಿದೆ.

    ಕ್ವಾಲಿಟಿ ಕಂಪನಿಯು ಸುಮಾರು 1,400 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಬ್ಯಾಂಕ್​ ಆಫ್​ ಇಂಡಿಯಾ ದೂರು ನೀಡಿದ ಬಳಿಕ ತನಿಖಾ ಸಂಸ್ಥೆ ದೂರು ದಾಖಲಿಸಿಕೊಂಡಿದ್ದು, ದೆಹಲಿ, ಬುಲಂದ್​ಶಹರ್​, ಶಹರನ್​ಪುರ್​, ಅಜ್ಮೇರ್​ ಮತ್ತು ಪಲ್ವಾಲ್​ ಸೇರಿದಂತೆ ಐಸ್​ಕ್ರೀಮ್​ ಕಂಪನಿಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

    ಇದನ್ನೂ ಓದಿ: ಡೇಟಿಂಗ್​ ಆ್ಯಪ್​ ವಿರುದ್ಧ ತಿರುಗಿಬಿದ್ದ ನಟಿ, ಟಿಎಂಸಿ ಸಂಸದೆ ನುಸ್ರತ್​ ಜಹಾನ್​..!

    ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರಾದ ಸಂಜಯ್​ ಧಿಂಗ್ರ, ಸಿದ್ಧಂತ್​ ಗುಪ್ತಾ ಮತ್ತು ಅರುಣ್​ ಶ್ರೀವಾತ್ಸವ ಹೆಸರು ಉಲ್ಲೇಖವಾಗಿದ್ದು, ಇತರೆ ಅಪರಿಚಿತರ ಹೆಸರು ಕೂಡ ಕೇಳಿಬಂದಿದೆ.

    ಕ್ವಾಲಿಟಿ ಕಂಪನಿಯೂ ಬ್ಯಾಂಕ್​ ನಿಧಿಗಳನ್ನು ಬೇರೆಡೆ ತಿರುಗಿಸುವುದು, ಸಂಬಂಧಿತ ಪಕ್ಷಗಳಿಗೆ ಅಕ್ರಮ ಹಣ ವರ್ಗಾವಣೆ, ನಕಲಿ ದಾಖಲೆ ಮತ್ತು ರಶೀದಿ ಹಾಗೂ ಸುಳ್ಳು ಲೆಕ್ಕಪತ್ರಗಳು ಮತ್ತು ನಕಲಿ ಸ್ವತ್ತುಗಳನ್ನು ನಿರ್ಮಿಸುವುದು ಸೇರಿದಂತೆ ಅನೇಕ ಮಾರ್ಗದಲ್ಲಿ ವಂಚನೆ ಎಸಗಿದೆ ಎಂದು ಬ್ಯಾಂಕ್​ ಆಫ್​ ಇಂಡಿಯಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇನ್ನು ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ಬಾಂಕುಗಳ ಒಕ್ಕೂಟದಲ್ಲಿ ಕೆನರಾ ಬ್ಯಾಂಕ್​, ಬ್ಯಾಂಕ್​ ಆಫ್​ ಬರೋಡಾ, ಐಡಿಬಿಐ, ಸೆಂಟ್ರಲ್​ ಬ್ಯಾಂಕ್​ ಇಂಡಿಯಾ, ಧನಲಕ್ಷ್ಮೀ ಬ್ಯಾಂಕ್​ ಮತ್ತು ಸಿಂಡಿಕೇಟ್​ ಬ್ಯಾಂಕ್​ಗಳು ಒಳಗೊಂಡಿವೆ. (ಏಜೆನ್ಸೀಸ್​)

    ರಾಮಮಂದಿರ ಭೂಮಿಪೂಜೆ ಬೆನ್ನಿಗೇ ಅಯೋಧ್ಯೆಯಲ್ಲಿ ರಿಯಾಲ್ಟಿ ಬೂಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts