More

    ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ ಎಂದ ಡಿಕೆ ಬ್ರದರ್​

    ಬೆಂಗಳೂರು: ಇಂದು(ಸೋಮವಾರ) ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ನಿವಾಸದ ಮೇಲೆ ದಾಳಿ ಮಾಡುವ ಮೂಲಕ ಸಿಬಿಐ ಶಾಕ್ ಕೊಟ್ಟಿದೆ. ಡಿಕೆಶಿ ಸಹೋದರ ಸುರೇಶ್​, ಆಪ್ತರ ಮನೆ ಸೇರಿದಂತೆ ಒಟ್ಟು 14 ಕಡೆ ಏಕಕಾಲಕ್ಕೆ ಅಧಿಕಾಗಳು ರೇಡ್​ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ. ಸುರೇಶ್​, ‘ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

    ‘ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಬಂದ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಾಗಲಿ ಮತ್ತು ಕುಗ್ಗುವುದಾಗಲಿ ದೂರದ ಮಾತು. ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ಧರಿದ್ದೇವೆ’ ಎಂದು ಸರಣಿ ಸ್ವೀಟ್​ ಮಾಡಿರುವ ಸುರೇಶ್​, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಟೀಕಿಸಿದ್ದಾರೆ.

    ಇದನ್ನೂ ಓದಿರಿ ‘ಸಿದ್ದುಗಿಂತ ಡಿಕೆಶಿ ದೊಡ್ಡ ನಾಯಕನಲ್ಲ, ಆದ್ರೂ ಅವರ ಮೇಲೆಯೇ ಸಿಬಿಐ ಏಕೆ ದಾಳಿ ಮಾಡಿದ್ರು?’

    ‘ಇಂದು ಮುಂಜಾನೆ ವೇಳೆಗೆ ನಮ್ಮ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ಎಲ್ಲ ರೀತಿಯಲ್ಲೂ ನಮ್ಮ ಕಡೆಯಿಂದ ಸಂಪೂರ್ಣ ಸ್ಪಂದನೆ ಸಿಕ್ಕಿದೆ. ಮುಂದೆಯೂ ಸಿಗಲಿದೆ’ ಎನ್ನುವ ಮೂಲಕ ಕಾನೂನಿನ ಕೆಲಸಕ್ಕೆ ಅಡ್ಡಿ ಮಾಡುವುದಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.

    ‘ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ. ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ. ನಿಮ್ಮ ಆರ್ಶೀವಾದ-ಹಾರೈಕೆ ಸದಾ ಹೀಗೆ ಇರಲಿ’ ಎಂದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಸುರೇಶ್​ ಮನವಿ ಮಾಡಿದ್ದಾರೆ.

    ಇದಕ್ಕೂ ಸಿಬಿಐ ದಾಳಿ ಬಗ್ಗೆ ಮಾತನಾಡಿದ್ದ ಡಿಕೆಶಿ ತಾಯಿ ಗೌರಮ್ಮ, ‘ದೊಡ್ಡ ಆಲಹಳ್ಳಿಯ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ, ಸುಮ್ಮನೆ ತಿರುಗುತ್ತಾರೆ. ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಿದ್ದಾರೆ. ನನ್ನ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ’ ಎಂದು ಅಸಮಾಧಾನ ಹೊರಹಾಕಿದ್ದರು.

    ನನ್ನ ಮಗನನ್ನು ಅವರ ಮನೆಯಲ್ಲೇ ಕೂರಿಸಿಕೊಳ್ಳಲಿ… ನಮಗೆ ಊಟ ಕೊಟ್ಟರೆ ಸಾಕೆಂದ ಡಿಕೆಶಿ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts