More

    ಕಾವೇರಿ ನೀರು, ರಾಜ್ಯ ಸರ್ಕಾರದಿಂದಲೇ ಜನರಿಗೆ ಮೋಸ;ಶರವಣ ವಾಗ್ದಾಳಿ

    ಬೆಂಗಳೂರು: ರಾಜ್ಯ ಸರ್ಕಾರ ಇಂಡಿಯಾ ಮೈತ್ರಿಕೂಟ ಓಲೈಕೆ ಮಾಡಲು ಕಾವೇರಿ ನೀರು ಬಿಟ್ಟು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ.ಶರವಣ ವಾಗ್ದಾಳಿ ನಡೆಸಿದರು.

    ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಆಕ್ರಮಣಕಾರಿ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೈಗೊಳ್ಳುತ್ತಿದೆ. ಪ್ರತಿ ಸಭೆಯಲ್ಲೂ, ಪ್ರತಿ ಬಾರಿಯೂ ಕರ್ನಾಟಕದ ವಿರುದ್ಧವೇ ಸೂಚನೆ, ಶಿಫಾರಸು ನೀಡುತ್ತಿರುವ ಈ ಸಮಿತಿಗಳು ತಾರತಮ್ಯ ಮಾಡುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಈ ಸಮಿತಿಗಳ ಬಣ್ಣ ಬಯಲು ಮಾಡಲಿ ಎಂದು ಹೇಳಿದರು.

    ನಾಮ್‌ಕಾವಸ್ತೆ ಸಂಸದರು, ಶಾಸಕರ ಸರ್ವಪಕ್ಷ ಸಭೆ ಕರೆದು ರಾಜ್ಯ ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರವೇ ರಾಜ್ಯದ ರೈತರಿಗೆ ಮೋಸ ಮಾಡಿದೆ.

    ಇಂಡಿಯಾ ಒಕ್ಕೂಟದ ಭಾಗವಾಗಿರುವ ತಮಿಳುನಾಡು ಸಿಎಂ ಮನವೊಲಿಸಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟೂ ಬಿಟ್ಟೂ ರೈತರ ಹಿತಾಸಕ್ತಿ ಬಲಿ ಕೊಡುತ್ತಿದೆ ಎಂದು ಆರೋಪಿಸಿದರು.

    ರಾಜ್ಯ ಸರ್ಕಾರ ಈಗಲಾದರೂ ನೀರು ಬಿಡುವುದಿಲ್ಲ ಎನ್ನುವ ಧೈರ್ಯ, ಸ್ಥೈರ್ಯ ತೋರಬೇಕು. ಇಂಥ ತಾಕತ್ತು ಈ ಸರ್ಕಾರಕ್ಕೆ ಇದೆಯೇ? ಸುಪ್ರೀಂ ಕೋರ್ಟ್‌ನಿಂದ ನೇಮಕವಾಗುವ ಸ್ವತಂತ್ರ ತಜ್ಞರ ನಿಯೋಗ ಕರ್ನಾಟಕದ ಮತ್ತು ತಮಿಳುನಾಡಿನ ಜಲಾಶಯಗಳಿಗೆ ಭೇಟಿ ನೀಡಿ ನ್ಯಾಯಾಲಯಕ್ಕೆ ವರದಿ ನೀಡಲಿ ಎಂದು ಶರವಣ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts