More

    ದೇವರ ಎತ್ತುಗಳಿಗೆ ಮೇವಿನ ಸೌಕರ್ಯ ಕಲ್ಪಿಸಿ

    ಚಳ್ಳಕೆರೆ: ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಕೂಡ್ಲಿಗಿ ತಾಲೂಕಿನ ಭಾಗದಲ್ಲಿರುವ ಬುಡಕಟ್ಟು ಪದ್ಧತಿ ದೇವರ ಆರಾಧನೆಯ ಎತ್ತುಗಳಿಗೆ

    ಸಕಾಲಕ್ಕೆ ಸರ್ಕಾರ ಮೇವು ಮತ್ತು ಸೌಕರ್ಯ ಒದಗಿಸುವುದು ಅಗತ್ಯ ಎಂದು ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ಹೇಳಿದರು.

    ತಾಲೂಕಿನ ನನ್ನಿವಾಳ ಗ್ರಾಪಂ ಬೊಮ್ಮದೇವರಹಟ್ಟಿಯಲ್ಲಿರುವ 300ಕ್ಕೂ ಹೆಚ್ಚು ದೇವರ ಎತ್ತುಗಳಿಗೆ ಸುಧಾಮೂರ್ತಿ ಫೌಂಡೇಷನ್ ನೆರವಿನಿಂದ ಮಂಗಳವಾರ ಮೇವು ವಿತರಿಸಿ ಮಾತನಾಡಿದರು.

    ಇಲ್ಲಿನ ದೇವರ ಎತ್ತುಗಳ ಪೋಷಣೆ ಬಹುವರ್ಷಗಳಿಂದ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಮತ್ತು ಪ್ರಾಕೃತಿಕ ವಿಕೋಪಗಳ ನಡುವೆ ಎತ್ತುಗಳ ರಕ್ಷಣೆ ಕಷ್ಟವಾಗುತ್ತಿದೆ ಎಂದರು.

    ಈ ಹಿಂದೆ ಎತ್ತುಗಳಿಗೆ ಮೇವು ಸಿಗದೆ ಸಾವಿಗೀಡಾಗಿವೆ. ಮೂಕಪ್ರಾಣಿಗಳ ಪೋಷಣೆ ಮಾನವನ ಧರ್ಮವಾಗಬೇಕು. ನೂರಾರು ದೇವರ ಎತ್ತುಗಳಿಗೆ ಸಕಾಲಕ್ಕೆ ಮೇವು, ನೀರು ಸೌಲಭ್ಯ ಕೊಡುವ ಕೆಲಸವಾಗಬೇಕು.

    ಅದೇ ರೀತಿ ಮಳೆ-ಗಾಳಿ ಮತ್ತು ಚಳಿಯಿಂದ ರಕ್ಷಣೆ ಮಾಡಲು ಸುಸಜ್ಜಿತ ಗೋಶಾಲೆ ಮಾದರಿಯಲ್ಲಿ ಶೆಡ್ ನಿರ್ಮಾಣ ಅಗತ್ಯವಿದೆ ಎಂದು ಹೇಳಿದರು.

    ಇಲ್ಲಿ ವಾಸವಾಗಿರುವ ಮ್ಯಾಸಬೇಡರ ಬುಡಕಟ್ಟು ಸಮುದಾಯ ಕೆಲ ಕಟ್ಟುಪಾಡುಗಳಲ್ಲಿ ಪೂರ್ವಿಕರ ಆಚರಣಾ ಪದ್ಧತಿಗಳನ್ನು ರೂಢಿಸಿಕೊಂಡು ಬರಲಾಗಿದೆ.

    ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಂಸ್ಕೃತಿಗಳ ಆಚರಣಾ ನೆಲೆಯಲ್ಲಿ ಇಲ್ಲಿ ಪೂಜಿಸುತ್ತಿರುವ ಬೊಮ್ಮದೇವರು ಸೇರಿ ವಿವಿಧ ಕಟ್ಟೆಮನೆಗಳ ದೇವರ ಹೆಸರಿನಲ್ಲಿ ಎತ್ತುಗಳನ್ನು ಸಾಕುತ್ತಿರುವುದು ಬಹಳ ವಿಶೇಷ ಎಂದರು.

    ಮಳೆಯ ಕೊರತೆಯಿಂದ ಕೆಲವೊಮ್ಮೆ ದೇವರ ಎತ್ತುಗಳನ್ನು ಮೇವು ಅರಸಿ ಬೇರೆಡೆಗೆ ಹೊಡೆದುಕೊಂಡು ಹೋಗುತ್ತೇವೆ. ಆದರೆ, ಸಾಮಾನ್ಯ ರಾಸುಗಳಂತೆ ಎಲ್ಲೆಂದರಲ್ಲಿ ಉಳಿಸಿಕೊಳ್ಳಲು ಆಗುವುದಿಲ್ಲ.

    ಇಂತಹ ವಿಶೇಷ ದೇವರ ಎತ್ತುಗಳಿಗೆ ಪ್ರತ್ಯೇಕ ಮೇವು ನೀರಿನ ವ್ಯವಸ್ಥೆ ಅಗತ್ಯವಿದೆ ಎಂದು ಎತ್ತುಗಳ ಪೋಷಣೆಯಲ್ಲಿರುವ ಕಿಲಾರಿಗಳು ಸ್ವಾಮೀಜಿ ಬಳಿ ಹೇಳಿಕೊಂಡರು.

    ಮುಖಂಡರಾದ ಮಹೇಶ, ಸಿದ್ದೇಶ್, ಗಿರೀಶ್, ಮಂಜುನಾಥ, ಪಾಲಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts