More

    ದನಕರುಗಳಿಗೆ ಮೇವು ವಿತರಿಸಿ ಮೂಕ ಪ್ರಾಣಿಗಳ ಹಸಿವಿಗೆ ಸ್ಪಂದಿಸಿದ ಯುವ ತಂಡ

    ರಾಯಚೂರು: ಇಬ್ಬರು ದಾನಿಗಳು ಮೂಕ ಪ್ರಾಣಿಗಳ ಆಹಾರದ ಸಮಸ್ಯೆಗೆ ಸ್ಪಂದಿಸಿ, ಪಶು ಸಾಕಿದವರಿಗೆ ಉಚಿತವಾಗಿ ಮೇವು ವಿತರಿಸುವ ಮೂಲಕ ಮನ ಮಿಡಿದಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು ನಿರಂತರವಾಗಿ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿವೆ. ದುರ್ಬಲ ಮತ್ತು ನಿರ್ಗತಿಕ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ರಾಯಚೂರಿನ ಬ್ಲೆಡ್ ಬ್ಯಾಂಕ್‌ನ ವಾಲೆಂಟರ್ಸ್‌ನ ಮುಖ್ಯಸ್ಥ ವೀರರಾಜು ಜಸ್ತಿ, ಸಾಯಿ ಮಂದಿರದ ಮುಖ್ಯಸ್ಥ ಸಾಯಿ ಕಿರಣ ಆದೋನಿ ಸ್ಪಂದಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಬೆಳೆದ ಭತ್ತ ಮತ್ತು ಜೋಳದ ಸೊಪ್ಪೆಯನ್ನು ಖರೀದಿಸಿ, ಪಶುಗಳನ್ನು ಸಾಕುವ ಜನರಿಗೆ ನೀಡುತ್ತಿದ್ದಾರೆ. ಪಶು ಸಾಕಣೆ ಮಾಡಿದವರು ಮೇವಿನ ಸಮಸ್ಯೆ ಇದ್ದರೆ ನಗರದ ಪ್ರವಾಸಿ ಮಂದಿರದೊಳಗಿನ ಸಾಯಿ ಮಂದಿರ ಆವರಣಕ್ಕೆ ಬಂದು ಉಚಿತವಾಗಿ ಪಡೆದುಕೊಂಡು ಹೋಗಲು ಮನವಿ ಮಾಡಿದ್ದಾರೆ.

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಭಾಪತಿ ಡಾ.ಬಸನಗೌಡ ಪಿ.ಪಾಟೀಲ್, ರಾಜ್ಯ ನಿರ್ದೇಶಕ ವಿಜಯಕುಮಾರ ಶಾವಂತಗೇರಿ, ಸಂಚಾಲಕ ದಂಡಪ್ಪ ಬಿರಾದಾರ್, ಗ್ರೀನ್ ರಾಯಚೂರು ಸಂಸ್ಥೆಯ ಮುಖ್ಯಸ್ಥ ರಾಜೇಂದ್ರ ಶಿವಾಳೆ, ಶ್ರೀನಿವಾಸ ಕಲ್ಯಾಣಕರ್ ಇಬ್ಬರು ದಾನಿಗಳ ಸೇವೆಗೆ ಕೈ ಜೋಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts