More

    ಅಶಿಸ್ತಿಗಾಗಿ ಕಿಶನ್, ಶ್ರೇಯಸ್‌ಗೆ ಆಫ್ಘನ್ ಸರಣಿಯಿಂದ ಕೊಕ್?: ಸ್ಪಷ್ಟನೆ ನೀಡಿದ ಕೋಚ್ ದ್ರಾವಿಡ್

    ಮುಂಬೈ: ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಟಿ20 ತಂಡಕ್ಕೆ ಪುನರಾಗಮನ ಕಂಡ ನಡುವೆ ಯುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಅ್ಘಾನಿಸ್ತಾನ ವಿರುದ್ಧ ಸರಣಿಯಿಂದ ಹೊರಗಿಟ್ಟಿದ್ದು ಅಚ್ಚರಿ ತಂದಿತ್ತು. ಇದರ ಹಿಂದಿನ ಕಾರಣ ಈಗ ಬೆಳಕಿಗೆ ಬಂದಿದೆ. ಅಶಿಸ್ತಿನ ವರ್ತನೆಗಾಗಿ ಬಿಸಿಸಿಐ ಇವರಿಬ್ಬರನ್ನು ಕೈಬಿಟ್ಟಿದ್ದು, ಮುಂಬರುವ ಟಿ20 ವಿಶ್ವಕಪ್ ಆಡುವ ಕನಸು ಕೂಡ ತೂಗುಯ್ಯಲೆಯಲ್ಲಿದೆ ಎಂದು ವರದಿಯಾಗಿದೆ.

    ಇಶಾನ್ ಕಿಶನ್ ಮಾನಸಿಕ ಆರೋಗ್ಯದ ಕಾರಣ ನೀಡಿ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಿಂದ ಬಿಡುವು ಪಡೆದು ತವರಿಗೆ ಮರಳಿದ್ದರು. ಆದರೆ, ಬಳಿಕ ದುಬೈನಲ್ಲಿ ಪಾರ್ಟಿ ಮಾಡಿದ್ದರು ಮತ್ತು ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋನಲ್ಲೂ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದರು. ಕಿಶನ್ ಅವರ ಈ ನಡವಳಿಕೆ ಬಿಸಿಸಿಐ ಕಣ್ಣು ಕೆಂಪಾಗಿಸಿದೆ. ಕುಟುಂಬದೊಂದಿಗೆ ಕಾಲ ಕಳೆಯಲು ಬ್ರೇಕ್ ಪಡೆದಿದ್ದ ಕಿಶನ್ ಮೋಜು-ಮಸ್ತಿ ಮಾಡುವ ಮೂಲಕ ಅಶಿಸ್ತು ತೋರಿದ್ದಾರೆ. ಆ್ಘನ್ ಸರಣಿಗೆ ಲಭ್ಯವಿರುವುದಾಗಿ ತಿಳಿಸಿದ ಕಿಶನ್ ವಡೋದರದಲ್ಲಿ ಅಭ್ಯಾಸ ಆರಂಭಿಸಿದ್ದರು. ಆದರೆ ಆಯ್ಕೆಗಾರರು ಆ್ಘನ್ ಸರಣಿಯಿಂದ ಅವರನ್ನು ಹೊರಗಿಟ್ಟಿದ್ದಾರೆ ಎನ್ನಲಾಗಿದೆ.

    ಇನ್ನು ಶ್ರೇಯಸ್ ಅಯ್ಯರ್ ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ನಿರೀಕ್ಷೆಗೆ ತಕ್ಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಲರಾಗಿದ್ದರು. ಜತೆಗೆ ಅವರ ಹೊಡೆತಗಳ ಆಯ್ಕೆ ಕೆಟ್ಟದಾಗಿತ್ತು. ಹೀಗಾಗಿ ಅವರನ್ನು ಆ್ಘನ್ ವಿರುದ್ಧ ಸರಣಿಗೆ ಪರಿಗಣಿಸದೆ, ದೇಶೀಯ ಕ್ರಿಕೆಟ್‌ನಲ್ಲಿ ಆಡುವಂತೆ ಸೂಚಿಸಲಾಗಿದೆ. ಹೀಗಾಗಿ ರಣಜಿ ಟ್ರೋಫಿ 2ನೇ ಸುತ್ತಿನ ಪಂದ್ಯಕ್ಕೆ ಅವರು ಮುಂಬೈ ತಂಡ ಸೇರಿಕೊಂಡಿದ್ದಾರೆ. ಶ್ರೇಯಸ್ ಐದು ವರ್ಷಗಳ ಬಳಿಕ ರಣಜಿ ಪಂದ್ಯ ಆಡಲಿದ್ದಾರೆ.

    ತಳ್ಳಿಹಾಕಿದ ಕೋಚ್ ದ್ರಾವಿಡ್: ಅಶಿಸ್ತಿಗಾಗಿ ಕಿಶನ್ ಮತ್ತು ಶ್ರೇಯಸ್‌ಗೆ ಆ್ಘನ್ ಸರಣಿಯಿಂದ ಕೊಕ್ ನೀಡಲಾಗಿದೆ ಎಂಬ ವರದಿಯನ್ನು ಕೋಚ್ ರಾಹುಲ್ ದ್ರಾವಿಡ್ ತಳ್ಳಿಹಾಕಿದ್ದಾರೆ. ಕಿಶನ್ ಆಯ್ಕೆಗೆ ಲಭ್ಯರಿರಲಿಲ್ಲ. ದ.ಆಫ್ರಿಕಾದಲ್ಲಿ ಬ್ರೇಕ್ ಪಡೆಯಲು ನಿರ್ಧರಿಸಿದ್ದರು. ನಾವೂ ಅದಕ್ಕೆ ಒಪ್ಪಿಗೆ ಸೂಚಿಸಿ, ಬೆಂಬಲಿಸಿದ್ದೇವೆ. ಸಂಪೂರ್ಣ ಚೇತರಿಕೆಯ ನಂತರ ದೇಶೀಯ ಕ್ರಿಕೆಟ್ ಆಡಿ ತಂಡಕ್ಕೆ ಮರಳುತ್ತಾರೆ. ಇದೇ ರೀತಿ ಶ್ರೇಯಸ್‌ಗೂ ಅಶಿಸ್ತಿನ ವರ್ತನೆಗೂ ಯಾವುದೇ ಸಂಬಂಧವಿಲ್ಲ. ತಂಡದಲ್ಲಿ ಸಾಕಷ್ಟು ಬ್ಯಾಟರ್‌ಗಳಿದ್ದಾರೆ. ಎಲ್ಲ ಆಟಗಾರರನ್ನು ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸುವುದು ಕಷ್ಟ. ದ. ಆಫ್ರಿಕಾದಲ್ಲೂ ಅವರು ಟಿ20 ಸರಣಿ ಆಡಿರಲಿಲ್ಲ. ಜತೆಗೆ ತಂಡದ ಆಯ್ಕೆಯ ಸಮಯದಲ್ಲಿ ಯಾವುದೇ ಅಶಿಸ್ತಿನ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts