More

    ಶಿಕ್ಷಕನ ಮನೆಯಲ್ಲಿ ನಗದು, ವಾಚ್, ಜರ್ಕಿನ್ ಕಳವು

    ಶಿವಮೊಗ್ಗ: ಅಶೋಕನಗರದಲ್ಲಿ ಕಿಟಕಿ ಮೂಲಕ ಕೈ ಹಾಕಿ ಮನೆ ಬಾಗಿಲು ತೆರೆದ ಕಳ್ಳರು 43,800 ರೂ. ನಗದು, ಬೆಲೆ ಬಾಳುವ ವಾಚ್, ಜರ್ಕಿನ್ ಮತ್ತು ಕಂಪೌಂಡ್ ಒಳಗೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಕದ್ದೊಯ್ದಿದ್ದಾರೆ.

    ಶಿಕ್ಷಕ ಕೊಟ್ರಪ್ಪ ಎಂಬುವರ ಮನೆಯಲ್ಲಿ ರಾತ್ರಿ ಎಲ್ಲರು ಊಟ ಮುಗಿಸಿ 11 ಗಂಟೆ ಸುಮಾರಿಗೆ ಮಲಗಿದ್ದರು. ರಾತ್ರಿ ಒಳಗೆ ನುಗ್ಗಿರುವ ಕಳ್ಳರು ಕೊಟ್ರಪ್ಪ ಅವರ ಕೊಠಡಿಯಲ್ಲಿದ್ದ ಬೀರುವಿನಿಂದ ನಗದು, ಮಗನ ಬೆಡ್ ರೂಂನಲ್ಲಿರುವ ಬೀರುವಿನಿಂದ 4 ವಾಚ್, 2 ಜರ್ಕಿನ್, ಶೋಕೇಸ್‌ನಲ್ಲಿದ್ದ 3 ವಾಚ್, ರಾಯಲ್ ಎನ್‌ಫಿಲ್ಡ್ ಬೈಕ್‌ನ ಕಳವು ಮಾಡಿಕೊಂಡು ಹೋಗಿದ್ದಾರೆ.
    ಪಕ್ಕದ ಮನೆಯಲ್ಲಿರುವ ಸಹೋದರ ಬೆಳಗ್ಗೆ ರೈಲಿಗೆ ತೆರಳಲು ಮನೆಯಿಂದ ಹೊರಬಂದಾಗ ಕೊಟ್ರಪ್ಪ ಅವರ ಮನೆಯ ಗೇಟ್ ತೆಗೆದಿತ್ತು. ಕಾಂಪೌಂಡ್ ಒಳಗಿರುವ ಬೈಕ್ ನಾಪತ್ತೆಯಾಗಿತ್ತು. ಕೂಡಲೆ ಕೊಟ್ರಪ್ಪ ಅವರಿಗೆ ಕರೆ ಮಾಡಿದ್ದರು. ಜತೆಗೆ ಮನೆಯ ಮುಂಬಾಗಿಲು ಹೊರಗಿನಿಂದ ಚಿಲಕ ಹಾಕಲಾಗಿತ್ತು. ಹಾಗಾಗಿ ಹಿಂಬದಿ ಬಾಗಿಲಿನಿಂದ ಹೊರ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕಳ್ಳರು ಕಿಟಕಿಯಿಂದ ಒಳಗೆ ಕೈ ಹಾಕಿ ಬಾಗಿಲಿನ ಚಿಲಕ ತೆಗೆದು ಕಳ್ಳತನ ಮಾಡಿದ್ದಾರೆ ಎಂದು ಕೊಟ್ರಪ್ಪ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts