More

    ರಾಜಧಾನಿಯಲ್ಲಿ ನೆಮ್ಮದಿಯ ಉಸಿರು : 10,400ಕ್ಕೆ ಇಳಿದ ನಿತ್ಯ ಪ್ರಕರಣ; ತಗ್ಗಿದ ಆಕ್ಸಿಜನ್​ ಬೇಡಿಕೆ

    ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ಇದ್ದ ಕರೊನಾ ಗಂಭೀರ ಸ್ಥಿತಿಯು ಸುಧಾರಿಸುವ ಸುಳಿವು ಕಾಣಿಸುತ್ತಿದೆ. ದೆಹಲಿ ನಗರದ ಕರೊನಾ ಸೋಂಕಿನ ದರದಲ್ಲಿ ಇಳಿಕೆಯಾಗುವುದರೊಂದಿಗೆ, ಆಕ್ಸಿಜನ್ ಮತ್ತು ಬೆಡ್​ ಲಭ್ಯತೆ ಸಾಕಷ್ಟಿದೆ ಎನ್ನಲಾಗಿದೆ.

    ದೆಹಲಿಯ ಆಕ್ಸಿಜನ್ ಅಗತ್ಯವು ದಿನಕ್ಕೆ 700 ಮೆಗಾಟನ್​ಗಳಿಂದ 582 ಮೆಗಾಟನ್​ಗಳಿಗೆ ಇಳಿದಿದೆ. ಆದ್ದರಿಂದ ಹೆಚ್ಚುವರಿಯಾಗಿರುವ ಆಕ್ಸಿಜನ್​ಅನ್ನು ಬೇರೆ ರಾಜ್ಯಗಳಿಗೆ ನೀಡಬಹುದು ಎಂದು ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಡೆಪ್ಯುಟಿ ಸಿಎಂ ಮನೀಶ್​ ಸಿಸೋಡಿಯಾ ಹೇಳಿದ್ದಾರೆ. ಇಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, ನಗರದಲ್ಲಿ ದಿನಂಪ್ರತಿ ದಾಖಲಾಗುತ್ತಿರುವ ಸೋಂಕಿನ ಪ್ರಮಾಣವೂ ಕಡಿಮೆಯಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!

    “ಹೊಸ ಪ್ರಕರಣಗಳ ಸಂಖ್ಯೆಯು 15 ದಿನಗಳ ಹಿಂದೆ 28,000 ಇದ್ದಿದ್ದು ಇದೀಗ 10,400 ಕ್ಕೆ ಇಳಿದಿದೆ. ಪಾಸಿಟಿವಿಟಿ ರೇಟ್​ ಕೂಡ ಶೇ. 35 ರಿಂದ ಶೇ. 14 ಕ್ಕೆ ಇಳಿದಿದೆ. ಕೋವಿಡ್​ ಆಸ್ಪತ್ರೆಗಳಲ್ಲಿ ಈಗ ಹೆಚ್ಚು ಬೆಡ್​ಗಳು ಲಭ್ಯವಿದ್ದು, ಆಕ್ಸಿಜನ್ ಬೇಡಿಕೆಯೂ ತಗ್ಗಿದೆ” ಎಂದು ಸಿಸೋಡಿಯಾ ತಿಳಿಸಿದ್ದಾರೆ. (ಏಜೆನ್ಸೀಸ್)

    ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್​ ಡೋಸ್​ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ

    ಈ ಚಿತ್ರದಲ್ಲಿ ಜನಪ್ರಿಯ ಕಾಮೆಡಿಯನ್ ಇದ್ದಾರೆ… ಯಾರು ಹೇಳ್ತೀರಾ ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts